ಹಾವೇರಿ

ನಮ್ಮ ಕೆಲಸಗಳು ಶಾಶ್ವತ: ಹೊಸಮನಿ

ಶಿಗ್ಗಾಂವಿ:   ಸರ್ಕಾರಿ ನೌಕರಿ ಸಿಗುವುದು ಆಕಸ್ಮಿಕ ನಿವೃತ್ತಿ ಶಾಶ್ವತ. ಅದರ ಮಧ್ಯ ನಾವು ಜನ ಸಾಮಾನ್ಯರ ಜೊತೆ ಬೆರೆತು ಮಾಡುವ ಒಳ್ಳೆಯ ಕೆಲಸಗಳು ಶಾಶ್ವತವೆಂದು ಸಿಪಿಐ ಹೊಸಮನಿ ಹೇಳಿದರು. ತಾಲೂಕಿನ ಬಂಕಾಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ 38 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಎಎಸ್‌ಐ ಸಿ.ಕೆ. ಜೋಡಳ್ಳಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಂತರ ಪಿಎಸ್‌ಐ ಸಿದ್ದಾರೂಢ ಬಡಿಗೇರ ಮಾತನಾಡಿ, ಜೋಡಳ್ಳಿಯವರು ಹಿರಿಯ ಅಧಿಕಾರಿಗಳ ಆದೇಶವನ್ನು ಚಾಚು ತಪ್ಪದೆ ಪಾಲಿಸುವಂತಹ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು.
ಈ ಠಾಣೆಯಲ್ಲಿಯೇ ಹಿರಿಯ ಅನುಭವಿ ಮಾರ್ಗದರ್ಶಕರಾಗಿದ್ದರು. ಅವರನ್ನು ನಾವು ಬೀಳ್ಕೊಡಲು ಮನಸ್ಸಿಲ್ಲದಿದ್ದರೂ ಅದು ಸರ್ಕಾರದ ನಿಯಮದಿಂದ ಅನಿವಾರ್ಯ ಎಂದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ವೇದಿಕೆಯಲ್ಲಿಯೇ ವಿವಿಧ ಸಂಘಟನೆಗಳು ಸಿ.ಕೆ. ಜೋಡಳ್ಳಿಯವರಿಗೆ ಸನ್ಮಾನಿಸಿದರು. ಪುರಸಭೆ ಸದಸ್ಯರಾದ ಎನ್.ವಿ. ಪದ್ಮಾ, ಮಾಲತೇಶ ಬಾಬುಸಿಂಗನವರ, ಮಾಜಿ ಪುರಸಭೆ ಸದಸ್ಯ ಗುಡ್ಡಪ್ಪ ಮತ್ತೂರ, ಗುರುಶಾಂತಪ್ಪ, ಶಿವಾನಂದ ದೇವಸೂರ, ಮಂಜುನಾಥ ಕೂಲಿ, ಮಲ್ಲಿಕಾರ್ಜುನ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!