ಕೊಡಗು

ಅಪ್ರಾಪ್ತೆ ಅತ್ಯಾಚಾರ ಯತ್ನ: ಮೂವರ ಸೆರೆ

ಸುಂಟಿಕೊಪ್ಪ: ಮೂವರು ಯುವಕರು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿ ವಿಫಲರಾಗಿ ಇದೀಗ ಪೊಲೀಸರ ಆತಿಥಿಗಳಾಗಿರುವ ಘಟನೆ ಕಾಂಡನಕೊಲ್ಲಿಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಯತ್ನಿಸಿದ ಮೂವರ ಪೈಕಿ ಇಬ್ಬರು ಸಹೋದರರಾಗಿದ್ದು ಇನ್ನೊಬ್ಬ ಅಪ್ರಾಪ್ತ ವಯಸ್ಕನಾಗಿದ್ದಾನೆ.
ಇಲ್ಲಿಗೆ ಸಮೀಪದ ಕಾಂಡನಕೊಲ್ಲಿಯ ತೋಟವೊಂದರ ನಿವಾಸಿಯೊಬ್ಬರ ಪುತ್ರಿ (16 ವರ್ಷ) ಮಡಿಕೇರಿ ಕಾಲೇಜೊಂದರಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದು, ಫೆ.6ರಂದು ರಾತ್ರಿ 7.15ಕ್ಕೆ ಮನೆಯ ಅಂಗಳದಲ್ಲಿದ್ದ ಸಂದರ್ಭ ಸ್ಥಳೀಯ ನಿವಾಸಿಗಳಾದ ರುಕ್ಮಯ್ಯ ಎಂಬವರ ಪುತ್ರರಾದ ಶಶಿಧರ್ ಮತ್ತು ಸತೀಶ್ ಹಾಗೂ ಟ್ರ್ಯಾಕ್ಟರ್ ಚಾಲಕ ದಿನೇಶ್ ಎಂಬವರ ಪುತ್ರ ಸುನಿಲ್ ಹಳೇ ವೈಷಮ್ಯದಿಂದ ಯುವತಿಯನ್ನು  ತೋಟದ ಒಳಗೆ ಅಟ್ಟಿಸಿಕೊಂಡು ಹೋಗಿದ್ದಾರೆ.
ನೆಲಕ್ಕೆ ಬಿದ್ದ ಯುವತಿಯನ್ನು ಪಾಳು ಮನೆಯೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ. ಕತ್ತಿನಲ್ಲಿದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳುವುದರೊಂದಿಗೆ ಆಕೆಯ ನಗ್ನ ಚಿತ್ರವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಯುವತಿಯ ಕಿರುಚಾಟಕ್ಕೆ ಪ್ರಕರಣ ಬಯಲಾಗಿದೆ.
ಡಿ.ವೈ.ಎಸ್.ಪಿ. ಪೌಲ್ ವರ್ಮ, ವೃತ್ತ ನಿರೀಕ್ಷಕ ಗಣೇಶ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಎಸ್.ಪಿ. ಕೃಷ್ಣಕುಮಾರ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಆರೋಪಿಗಳ ಪೈಕಿ ಶಶಿಧರ್ ಎಂಬಾತ ವಿವಾಹಿತನಾಗಿದ್ದು, ಸುನಿಲ್ ಎಂಬಾತ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾನೆ.
ಈತನೇ ಯುವತಿಯ ಮೇಲೆ ವಿಪರೀತ ಲೈಂಗಿಕ ದೌರ್ಜನ್ಯ ಎಸಗಿರುವದಾಗಿ ಯುವತಿಯ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!