ಕೊಡಗು

'ಕುಶಾಲನಗರ ಬಂದ್ ರಾಜಕೀಯ ಗಿಮಿಕ್‌'

ಕುಶಾಲನಗರ: ನೂತನ ಕಾವೇರಿ ತಾಲೂಕು ಹೋರಾಟ ಸಮಿತಿ ಕುಶಾಲನಗರ ಬಂದ್ ನಡೆಸಿರುವುದು ಒಂದು ರೀತಿಯ ರಾಜಕೀಯ ಗಿಮಿಕ್ ಎಂದು ಸುಂಟಿಕೊಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ. ಭಾರತೀಶ್ ಹೇಳಿದ್ದಾರೆ.
ಬುಧವಾರ ನಡೆದ ಕುಶಾಲನಗರ ಬಂದ್‌ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಕಾವೇರಿ ತಾಲೂಕಿನ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಶಿಫಾರಸು ಇಲ್ಲದಿದ್ದರೂ ಸಮಿತಿಯ ಕೆಲವರು ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಸಂದರ್ಭ ಸ್ವಾರ್ಥ ಸಾಧನೆಗಾಗಿ ಸಮಿತಿ ಅಧ್ಯಕ್ಷರು ಸುಂಟಿಕೊಪ್ಪ ಭಾಗದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಕುಶಾಲನಗರ ಬಂದ್ ನಡೆಸಿರುವುದರ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಹೋರಾಟ ಸಮಿತಿಯನ್ನು ಪುನಾರಚಿಸಿ ಹೋರಾಟ ರೂಪಿಸಿದರೆ ಎಲ್ಲರ ಸಹಕಾರ ಒದಗುವ ಸಾಧ್ಯತೆ ಅಧಿಕವಾಗಿದೆ ಎಂದು ಭಾರತೀಶ್ ಅಭಿಪ್ರಾಯ ವ್ಯಕ್ತಪಟ್ಟರು.
ರಾಜಕೀಯ ರಹಿತ ಹೋರಾಟ ಅಗತ್ಯ: ಜೆಡಿಎಸ್ ಮುಖಂಡ ಸಿ.ವಿ.ನಾಗೇಶ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ನೂತನ ಕಾವೇರಿ ತಾಲೂಕು ರಾಜಕೀಯ ರಹಿತವಾದ ವ್ಯಕ್ತಿಗಳ ನೇತೃತ್ವದಲ್ಲಿ ಹೋರಾಟ ನಡೆದರೆ ಮಾತ್ರ ಯಶಸ್ಸು ಗಳಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಜೊತೆಯಾಗಲಿ, ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯಾಗಲಿ ಯಾವುದೇ ರೀತಿಯ ಚರ್ಚೆ ನಡೆಸದೆ ತಮ್ಮ ಸ್ವಾರ್ಥಕ್ಕಾಗಿ ಕುಶಾಲನಗರ ಬಂದ್ ನಡೆಸಿ ಜನಸಾಮಾನ್ಯರಿಗೆ ಕಿರಿಕಿರಿ ಮಾಡಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಕೇವಲ ಕುಶಾಲನಗರ ಪಟ್ಟಣವನ್ನು ಸೀಮಿತವಾಗಿಟ್ಟುಕೊಂಡು ಹೋರಾಟ ನಡೆದರೆ ಯಶಸ್ಸು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಉಸ್ತುವಾರಿ ಸಚಿವರು ನೂತನ ತಾಲೂಕು ರಚನೆ ಬಗ್ಗೆ ಒಲವು ತೋರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಚಿವರ ಕಡೆಗಣನೆ: ಕಾವೇರಿ ತಾಲೂಕು ಹೋರಾಟ ಸಮಿತಿಯ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವರನ್ನು ಕಡೆಗಣಿಸಿದ್ದಾರೆ ಎಂದು ನಗರ ಬಿಜೆಪಿ ಅಧ್ಯಕ್ಷ ಎಂ.ಎಂ. ಚರಣ್ ವಿಷಾದ ವ್ಯಕ್ತಪಡಿಸಿದ್ದಾರೆ.
 ಹೋರಾಟ ಸಮಿತಿ ಅಧ್ಯಕ್ಷರು ಈ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆಸದೆ ಕುಶಾಲನಗರ ಬಂದ್ ನಡೆಸಿ ಜನರನ್ನು ದಾರಿ ತಪ್ಪಿಸಿರುವುದು ಸರಿಯಲ್ಲ ಎಂದು ಚರಣ್ ತಿಳಿಸಿದ್ದಾರೆ.
ಇನ್ನು ಮುಂದಾದರೂ ಉಸ್ತುವಾರಿ ಸಚಿವರ ಮೂಲಕ ಸರ್ಕಾರದಲ್ಲಿ ತಾಲೂಕು ರಚನೆಗೆ ಕ್ರಮ ಕೈಗೊಳ್ಳಲು ಮುಂದಾದರೆ ಯಶಸ್ಸು ದೊರೆಯುವುದು ಸಾಧ್ಯ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!