ಕೊಡಗು

ಐನ್ಮನೆಯಲ್ಲಿ ಕಾರ್ಯಪ್ಪ ಜಯಂತಿ

ಗೋಣಿಕೊಪ್ಪಲು: ಇದೇ ಪ್ರಥಮ ಬಾರಿಗೆ ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದ ಕೊಡೆಂದೇರ ಐನ್ಮನೆಯಲ್ಲಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ, ಕೊಡೆಂದೇರ ಜನರಲ್ ತಿಮ್ಮಯ್ಯ ಹಾಗೂ ಕುಟುಂಬದ ಹಿರಿಯರಿಗೆ ಕೊಡೆಂದೇರ ಕುಟುಂಬಸ್ಥರೇ ಆದ ಮೇಜರ್ ಜನರಲ್ ಕೊಡಂದೇರ ಅರ್ಜುನ ಮುತ್ತಣ್ಣ ನಮನ ಸಲ್ಲಿಸಿದರು.
ಕುಂದದ ಕೊಡಂದೇರ ಐನ್ಮನೆಯಲ್ಲಿ ಎಫ್.ಎಂ. ಕಾರ್ಯಪ್ಪ ಅವರ 114ನೇ ಸಂಭ್ರಮಾಚರಣೆ ಕಂಡುಬಂತು. 9 ಗಂಟೆ ಸುಮಾರಿಗೆ ಆಗಮಿಸಿದ ಮೇಜರ್ ಜನರಲ್ ಮುತ್ತಣ್ಣ, ದೀಪಕ್ಕೆ ಕೈಮುಗಿದು ಹಿರಿಯರನ್ನು ಪ್ರಾರ್ಥಿಸಿದರು.
ಕೊಡಂದೇರ ಕುಟುಂಬದ ಅಧ್ಯಕ್ಷ  ಕೆ.ಎಂ. ದೇವಯ್ಯ, ಕಾರ್ಯದರ್ಶಿ ಕೆ.ಟಿ. ಕರುಂಬಯ್ಯ, ನಿವೃತ್ತ ಐಎಎಸ್ ಅಧಿಕಾರಿ ಕೆ.ಎಂ. ಮಂದಣ್ಣ, ಫೋರಂ ನಿರ್ದೇಶಕ ಶಂಭು ಅಯ್ಯಣ್ಣ ಮುಂತಾದವರು ಮೇಜರ್ ಜನರಲ್ ಮುತ್ತಣ್ಣ ಅವರನ್ನು ಸ್ವಾಗತಿಸಿದರು.
ಜಿ.ಪಂ. ಸದಸ್ಯ ಕೊಡಂದೇರ ಗಣಪತಿ ಅವರು ಐನ್ಮನೆಗೆ ಭೇಟಿ ನೀಡಿದ ಕುಟುಂಬಸ್ಥರನ್ನು ಸ್ವಾಗತಿಸಿದರಲ್ಲದೆ, ಯಾವದೇ ಶುಭಕಾರ್ಯ ಐನ್ಮನೆಯಿಂದ ಅರಂಭಗೊಳ್ಳಲಿ. ಗುರು ಹಿರಿಯರ ಆಶೀರ್ವಾದದೊಂದಿಗೆ ಆರಂಭಗೊಳ್ಳುವ ಯಾವುದೇ ಕಾರ್ಯಕ್ರಮಕ್ಕೆ ವಿಘ್ನ ಇರುವದಿಲ್ಲ ಎಂದು ಹೇಳಿದರು.
ಅತಿಥಿಗಳಿಗೆ ಲಘು ಉಪಾಹಾರವನ್ನು ಐನ್ಮನೆಯಲ್ಲಿ ಏರ್ಪಡಿಸಲಾಗಿತ್ತು. ಐನ್ಮನೆ ಮುಂಭಾಗದ ಆವರಣದಲ್ಲಿ ಸಭೆ ನಡೆಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಸಾಧನೆಯ ಗುಣಗಾನ ಮಡಲಾಯಿತು.
ಬ್ರಿಟಿಷ್ ಸರ್ಕಾರದಲ್ಲಿ ಸಹಾಯಕ ಕಮಿಷನರ್ ಆಗಿದ್ದ, ಹಾಗೂ ಕೊಡಗು ಡಿಸಿಸಿ ಬ್ಯಾಂಕ್‌ನ ಸ್ಥಾಪಕ ಅಧ್ಯಕ್ಷರಾಗಿದ್ದ ರಾವ್ ಬಹದ್ದೂರ್ ಕುಟ್ಟಯ್ಯ ಅವರ ಸಾಧನೆಯನ್ನೂ ಈ ಸಂದರ್ಭ ಮೆಲುಕು ಹಾಕಲಾಯಿತಲ್ಲದೆ, ಕೊಡಂದೇರ ಕುಟುಂಬದಲ್ಲಿ ಮತ್ತಷ್ಟು ವೀರಾ ಸೇನಾನಿಗಳು ಹುಟ್ಟಿ ಬರಲಿ ಎಂದು ಫೋರಂ ಅಧ್ಯಕ್ಷ  ಕಂಡ್ರತಂಡ ಸುಬ್ಬಯ್ಯ ಅವರು ಹಾರೈಸಿದರು.
ಕೊಡಂದೇರ ಐನ್ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಟುಂಬ ಸದಸ್ಯರಾದ ಖಜಾಂಜಿ ಕೆ.ಎಸ್. ಕಿರಣ್, ಕೆ.ಕೆ.ನರೇನ್, ರಂಜನ್, ಗ್ರೇಷ್ಮಾ ಗಣಪತಿ, ಕೆ.ಎಂ. ಮಂದಣ್ಣ, ಡಾಟಿ ಮಂದಣ್ಣ, ಸಂದ್ಯಾ, ಉತ್ತರೆ ತಿಮ್ಮಯ್ಯ, ನಮಿತಾ, ಕೆ.ಎಂ. ಕಾರ್ಯಪ್ಪ( ಗೇರುಬಾಣೆ) ಕೊಡಂದೇರ ಚಂಗಪ್ಪ, ಕಂಡ್ರತಂಡ ಬೋಜಿ ಸುಬ್ಬಯ್ಯ ಅವರು ಪಾಲ್ಗೊಂಡಿದ್ದರು.
ನಂತರ 10 ಗಂಟೆ ಸುಮಾರಿಗೆ ಅಜರ್‌ಮೆನ್ ಮುತ್ತಣ್ಣ ಶಂಕು ಸ್ಥಾಪನೆಗೆ ಗೋಣಿಕೊಪ್ಪಲಿಗೆ ಆಗಮಿಸಿದರು. ಈ ಸಂದರ್ಭ ಮಡಿಕೇರಿ ಎಫ್.ಎಂ.ಕೆ.ಎಂ.ಸಿ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ಮೇಜರ್ ಜನರಲ್ ಮುತ್ತಣ್ಣ ಅವರಿಗೆ ಗೌರವ ವಂದನೆ ಅರ್ಪಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ