ಶನಿವಾರಸಂತೆ: ಕೊಡ್ಲಿಪೇಟೆಯ ಸುನ್ನಿ ಜಾಮಿಯಾ ಮಸೀದಿ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಪ್ರವಾದಿ ಸಂದೇಶ ಕಾರ್ಯಕ್ರಮ ಹಾಗೂ ವಾಹನ ರ್ಯಾಲಿ ನಡೆಯಿತು.
ಕೊಡ್ಲಿಪೇಟೆ ಸುನ್ನಿ ಜಾಮಿಯಾ ಮಸೀದಿ ವತಿಯಿಂದ ನಡೆದ ವಾಹನ ರ್ಯಾಲಿಗೆ ಕೊಡ್ಲಿಪೇಟೆ ಜಾಮಿಯಾ ಮಸೀದಿ ಅಧ್ಯಕ್ಷ ಮಹಮ್ಮದ್ ಉಸ್ಮಾನ್ ಚಾಲನೆ ನೀಡಿದರು.
ನಂತರ ಜಾಮಿಯಾ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಸ್ಲಿಂ ಧರ್ಮಗುರು ಇರ್ಸಾದ್ ತನ್ವಿ ಪ್ರವಾದಿ ಸಂದೇಶ ನೀಡಿದರು. ಸಭೆಯಲ್ಲಿ ಸಿದ್ದಿಕ್ಕಿ ಹುಸೇನ್, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಔರಂಗಜೇಬ್, ಪ್ರಮುಖರಾದ ವಾಹಬ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಎಚ್.ಎಂ. ಅಬ್ಬಾಸ್, ಬ್ಯಾಡಗೊಟ್ಟ ಹನೀಫ್, ಖಲೀದ್, ರಿಯಾಜ್ ಪಾಷ, ಮಿಲಾದ್, ಮಹಮ್ಮದ್ ಪಾಷ, ಆಹಮ್ಮದ್ ಉಸ್ಮಾನ್, ಇರ್ಸಾದ್ ರಾಜಾ, ಅಬ್ದುಲ್ ಸಮೀರ್ ಮುಂತಾದವರಿದ್ದರು.