ಬೀರುಗದ ಅಜ್ಜಮಾಡ ಕನ್ನಿಕೆ, ನಂದಿನಿ ತಂಡ ಮಾವಿನ ಸಾರು ಪ್ಯಾಕೆಟ್ ಅನ್ನು ಅಧಿಕವಾಗಿ ಮಾರಾಟ ಮಾಡಿದರು. ತೈಲ ಗ್ರಾಮ( ಕುಟ್ಟ) ಗಿರಿಜಾ ಬೋಪಣ್ಣ, ತನುಜಾ ಅವರ ಪಡ್ಡು, ಸಾಂಬಾರ್ ಪುಡಿ, ತೆಂಗು ಚೆಟ್ನಿ, ಕೋಳಿಕರಿ ವ್ಯಾಪಾರದ ಭರಾಟೆಯೂ ಜೋರಿತ್ತು. ಟಿ. ಶೆಟ್ಟಿಗೇರಿ ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಸ್ಥೆಯ ತಡಿಯಂಗಡ ಸೌಮ್ಯ ಕರುಂಬಯ್ಯ ಹಾಗೂ ಚಂಗುಲಂಡ ಅಶ್ವಿನಿ, ಕಾವೇರಿ ತಂಡದ ಕಜ್ಜಾಯ, ಚಾಕೋಲೆಟ್, ಜೆಲ್ಲಿ, ನಿಪ್ಪಟ್ಟು ವಿಶೇಷವಾಗಿತ್ತು. ಕಳತ್ಮಾಡು- ಬಾಳೆಲೆಯ ಕೊಲ್ಲೀರ ಗಂಗಾ, ಕಂಬಿರಂಡ ಪ್ರಕೃತಿ, ಮಲಚೀರ ರೇಶ್ಮಾ ಅವರ ವಿವಿಧ ವೈನ್ ಬಾಟಲ್‌ಗಳು ವೈನ್ ಪ್ರಿಯರ ಬಾಯಲ್ಲಿ ನೀರೂರಿಸಿದವು.
ಸ್ವೀಕಾರ್ ಹೋಮ್ಸ್ ಪೊನ್ನಂಪೇಟೆ ಹಾಗೂ ಭಾಂದವಿ ಕ್ಲಬ್ ಕುಟ್ಟ ಇವರ ವೀಳ್ಯ ವೈನ್, ಸುಟ್ಟಿರುವ ಹಂದಿ ಮಾಂಸ ಪ್ಯಾಕೆಟ್, ಕಣಿಲೆ ಪಲ್ಯ(ಎಳೆ ಬಿದಿರು), ಮಾನತಂಡ ಲೀಲಾ, ಚೇಮಿರ ಸೀತಮ್ಮ, ಹೊಟ್ಟೇಂಗಡ ನಯನಾ ತಂಡದ ಹಂದಿ ಮಾಂಸದ ಉಪ್ಪಿನ ಕಾಯಿ, ಕೊಯ್ಲೇ ಮೀನು ಉಪ್ಪಿನ ಕಾಯಿ ವಿಶೇಷವಾಗಿತ್ತು. ಕುಟ್ಟದ ತೀತಿರ ಗೀತಾ ಅಪ್ಪಯ್ಯ, ರೇಣು ಉತ್ತಪ್ಪ ಅವರ ಕೆಸವಿನ ಸಾರು, ಅಣಬೆ ಸಾರು, ಕಡುಂಬುಟ್ಟು ಪಂದಿಕರಿ ವಿಶೇಷವಾಗಿ ಗಮನಸೆಳೆಯಿತು. ಕುಟ್ಟದ ಚೆಕ್ಕೇರ ದೇಚುರಾಬಿನ್ ಅವರ ಕಾಫಿ ಲಿಕ್ಕರ್ ಸ್ಟ್ರಾಬೆರಿ ವೈನ್ ಬೇಡಿಕೆ ಅಧಿಕವಾಗಿತ್ತು. ಬಿರುನಾಣಿ -ಮರೆನಾಡು ಗ್ರಾಮದ ಕಾಯಪಂಡ ಪೂಜಿತಾ ಕೀಕಿರ ಆಶಿತಾ ಅವರ ಬೇಸನ್ ಲಾಡು, ಚಾಕೋ ಕೇರಾಮೆಲ್, 7 ಕಪ್ ಬರ್ಫಿ, ಚಾಕೋಲೇಟ್ ಬ್ರೌನಿ, ಗಾಂಧಾರಿ ಮೆಣಸು ಪೇಸ್ಟ್, ಕೋಟೂರು ಕಾಟಿಮಾಡ ಅಜಿತ್ ಅವರ ಬನಾನಾ ಕೇಕ್, ಕ್ಯಾರೆಟ್ ಕೇಕ್, ಕುಟ್ಟ ತೀತೀರ ಅನಿಲಾ ಸುಬ್ಬಯ್ಯ ಅವರ ನೂಪುಟ್ಟು- ಚಿಕನ್ ಸಾರು ಹೊಟ್ಟೆ ತಣಿಸಿತು.