ಕೊಡಗು

ರಾಜಾಪುರದಲ್ಲಿ ಗಾಯಾಳು ಕಾಡಾನೆ ಸಾವು

ಮಡಿಕೇರಿ: ಕಾಡಾನೆ ತಿವಿತದಿಂದ ಗಾಯಗೊಂಡಿದ್ದ ಹೆಣ್ಣಾನೆಯೊಂದು ಸಾವಿಗೀಡಾದ ಘಟನೆ ಗೋಣಿಕೊಪ್ಪಲು ಬಳಿಯ ರಾಜಾಪುರದಲ್ಲಿ ನಡೆದಿದೆ. ಸಾವಿಗೀಡಾಗಿ 3 ದಿನಗಳಾಗಿರಬಹುದೆಂದು ಶಂಕಿಸಲಾಗಿದೆ. ತಿತಿಮತಿ ಅರಣ್ಯ ವಲಯದ ಕಾಫಿ ಬೆಳೆಗಾರರಾದ ಶಾರದಾ ಅವರಿಗೆ ಸೇರಿದ ತೋಟದಲ್ಲಿ ಹೆಣ್ಣು ಕಾಡಾನೆ ಶವ ಪತ್ತೆಯಾಗಿತ್ತು. ಮೃತಪಟ್ಟ ಆನೆಗೆ 25 ವರ್ಷವಿರಬಹುದೆಂದು ಅಂದಾಜಿಸಲಾಗಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆಯ ಶವ ಪತ್ತೆಯಾಗಿದೆ.  ಮದ ಬಂದ ಗಂಡಾನೆ, ಹೆಣ್ಣಾನೆಗೆ ತಿವಿದಿದ್ದು, ಇದರಿಂದಾಗಿ ಗಾಯವಾದ  ಜಾಗ ಕೊಳೆತು ಆನೆ ಸಾವನಪ್ಪಿದೆ. ಪಶು ವೈದ್ಯಾಧಿಕಾರಿ ಉಮಾಶಂಕರ್ ಶವ ಪರೀಕ್ಷೆ ನಡೆಸಿದರು.  ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲ್ ಹಾಗೂ ಸಿಬ್ಬಂದಿ ಮೃತ ಕಾಡಾನೆ ಮಹಜರು ನಡೆಸಿದರು.
ಸಂಸದ ಆಪ್ತ ಸಹಾಯಕ ಪ್ರದೀಪ್ ಉತ್ತಯ್ಯ
ಮಡಿಕೇರಿ: ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಮಡಿಕೇರಿಯಲ್ಲಿನ ಕಚೇರಿಯಲ್ಲಿ ಸಂಸದರ ಆಪ್ತ ಸಹಾಯಕರಾಗಿ ಕಂಜಿತಂಡ ಪ್ರದೀಪ್ ಉತ್ತಯ್ಯ ನೇಮಕಗೊಂಡಿದ್ದಾರೆ. ಸಂಸದರಿಗೆ ಮನವಿ ಸಲ್ಲಿಸಲು ಮಡಿಕೇರಿ ಕೋಟೆ ಆವರಣದಲ್ಲಿನ ಸಂಸದರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!