ಕೊಡಗು

ಆನೆ ದಾಳಿ: ಅಪಾರ ಬೆಳೆ ಹಾನಿ

ನಾಪೋಕ್ಲು:  ಮರಂದೋಡು ಗ್ರಾಮದಲ್ಲಿ ಮರಿಯಾನೆಯೊಂದಿಗೆ ಮೂರು ಆನೆಗಳು ಅನ್ನಾಡಿಯಂಡ ದಿಲೀಪ್ ಕುಮಾರ್ ಎಂಬವರ 2.5 ಎಕರೆಯ ಕಾಫಿ ತೋಟ ಧ್ವಂಸಗೊಳಿಸಿವೆ.
ಶನಿವಾರ ರಾತ್ರಿ ಪೂರ್ತಿ ತೋಟದಲ್ಲಿದ್ದ ಕಾಡಾನೆಗಳಿಂದಾಗಿ ಬಾಳೆ, ಕಾಫಿ ಗಿಡಗಳು ಹಾನಿಯಾಗಿದ್ದು, ಅಪಾರ ನಷ್ಟವುಂಟಾಗಿದೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯ ಪಡುವಂತಾಗಿದೆ. ಹಿಂದೆ ಮರಂದೋಡ, ನಾಲಡಿ, ಚೇಲವಾರ ಗ್ರಾಮದಲ್ಲೂ ಸಹ ಕಾಡಾನೆಗಳ ಹಿಂಡು ತೋಟಗಳನ್ನು ನಾಶಪಡಿಸಿ ಅಪಾರ ನಷ್ಟ ಉಂಟುಮಾಡಿತ್ತು.
ಚೇಲವಾರದಲ್ಲೂ ಶನಿವಾರ ರಾತ್ರಿ ಕುಟ್ಟನ ಕಾರ್ಯಪ್ಪ, ಗೋಪಾಲ, ಹೊಸವೊಕ್ಕಲು ರಾಣಿ, ಹಾಗೂ ನಾಚಪ್ಪಗೆ ಸೇರಿದ ಬಾಳೆ ಮತ್ತು ಕಾಫಿ ತೋಟಗಳನ್ನು ಕಾಡಾನೆಗಳು ನಾಶಪಡಿಸಿದೆ ಎಂದು ಗ್ರಾ.ಪಂ. ಸದಸ್ಯ ಕುಟ್ಟನ ತುಳಸಿ ತಿಳಿಸಿದ್ದಾರೆ.
ಒಂದು ತಿಂಗಳಿನಿಂದ ಕಾಡಾನೆಗಳು ಹಿಂಡು ಹಿಂಡಾಗಿ ಈ ವಿಭಾಗದಲ್ಲಿ ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟುಮಾಡುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಲ್ಲದೆ ಕಾಡಾನೆಗಳಿಂದಾದ ನಷ್ಟದ ಪರಿಹಾರವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ