ಕೋಲಾರ

ಟ್ಯಾಂಕರ್ ಸ್ಫೋಟ: ಸತ್ತವರು ಮೂವರು

ಕೋಲಾರ: ರಾಷ್ಟ್ರೀಯ ಹೆದ್ದಾರಿ-4ರ ಮುಳಬಾಗಿಲು ಹೊರವಲಯ ನರಸಿಂಹತೀರ್ಥ ಸಮೀಪದ ದಾರನೇಹಳ್ಳಿ ಮಿಟ್ಟೆಯಲ್ಲಿ ಸೋಮವಾರ ರಾತ್ರಿ ಕಾರ್ಬನ್ ಡೈಆಕ್ಸೇಡ್ ತುಂಬಿದ್ದ ಟ್ಯಾಂಕರ್ ಲಾರಿ ಹಾಗೂ ಮರಳು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಮೂರು ಮಂದಿ ಎಂದು ಐಜಿಪಿ ಅಮರ ಕುಮಾರ್ ಪಾಂಡೆ ಅವರು ಸ್ಪಷ್ಪಪಡಿಸಿದ್ದಾರೆ.
ಅಪಘಾತ ಸ್ಥಳದಲ್ಲಿ ದೇಹಗಳು ಛಿದ್ರವಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಿರಬಹುದೆಂದು ಶಂಕಿಸಲಾಗಿತ್ತು. ವಿದ್ಯುತ್ ಕಡಿತಗೊಳಿಸಿದ್ದರಿಂದ ಕತ್ತಲಲ್ಲಿ ಕಾರ್ಯಾಚರಣೆ ನಡೆಸಬೇಕಾಯಿತು. ಮಂಗಳವಾರ ಬೆಳಗಿನ ಜಾವದವರೆಗೆ ಘಟನಾ ಸ್ಥಳದ ಸುತ್ತಮುತ್ತ ಕಾರ್ಯಾಚರಣೆ ಮುಗಿಸಿದ ನಂತರ ಸತ್ತವರು ಮೂರು ಮಂದಿ ಎಂದು ಖಚಿತವಾಗಿದ್ದು, ಈ ಮೂರು ದೇಹಗಳ ಗುರುತು ಪತ್ತೆಯಾಗಿರುವುದಾಗಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಸುರೇಶ್ ಎಂಬವರು ಹುಬ್ಬಳ್ಳಿ ಕಡೆಯವನಾಗಿದ್ದು ಟ್ಯಾಂಕರ್ ಲಾರಿ ಓಡಿಸುತ್ತಿದ್ದ. ಇನ್ನಿಬ್ಬರಲ್ಲಿ ಕೇಶವ ಮರಳು ಲಾರಿಯ ಚಾಲಕನಾಗಿದ್ದು ಮತ್ತೊಬ್ಬರನ್ನು ನಾರಾಯಣಪ್ಪ ಎಂದು ಗುರುತಿಸಲಾಗಿದೆ. ಇವರಿಬ್ಬರು ಮುಳಬಾಗಿಲು ತಾಲೂಕಿನ ಅಣಿಹಳ್ಳಿ ಗ್ರಾಮದವರಾಗಿದ್ದಾರೆಂದು ಹೇಳಿದ್ದಾರೆ.
ಘಟನೆಯಿಂದ ಗಾಯಗೊಂಡಿರುವ ಅದೇ ಗ್ರಾಮದ ಸುಬ್ರಮಣಿ ಅವರನ್ನು ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದ್ದು ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಎನ್‌ಡಿಆರ್‌ಎಫ್ ತಂಡ ಭೇಟಿ: ಕಾರ್ಬನ್ ಡೈಆಕ್ಸೈಡ್ ತುಂಬಿದ್ದ ಲಾರಿ ಸ್ಫೋಟದ ಸುದ್ದಿಯಿಂದಾಗಿ ಮಂಗಳವಾರ ತಮಿಳುನಾಡಿನ ಅರಕೋನಂನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 45 ಸಿಬ್ಬಂದಿ ಹಾಗೂ ಬೆಂಗಳೂರಿನ ಎಫ್.ಎಸ್.ಎಲ್ ಅಧಿಕಾರಿ ಬಿ.ಸಿ.ರವೀಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಸಾವು-ನೋವುಗಳ ಕುರಿತು ಕಾರ್ಯಾಚರಣೆ ನಡೆಸಿದ್ದು ಪೊಲೀಸ್ ಇಲಾಖೆಯಿಂದ ತನಿಖೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದ್ದಾರೆ.
ಘಟನೆಗೆ ಕಾರ್ಬನ್ ಡೈಆಕ್ಸೈಡ್ ತುಂಬಿದ್ದ ಲಾರಿಯಲ್ಲಿ ಸೋರಿಕೆ ಉಂಟಾಗಿ, ಟ್ಯಾಂಕರ್ ಲಾರಿಯು ಮರಳು ಲಾರಿಗೆ ಡಿಕ್ಕಿ ಹೊಡೆ ಸ್ಫೋಟದಿಂದ ಅಪಘಾತ ಸಂಭವಿಸಿರಬಹುದೆಂದು ತಜ್ಞರು ಅಭಿಪ್ರಾಯಿಸಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!