ಕೋಲಾರ

'ನೈತಿಕ ಮೌಲ್ಯಗಳ ಅಧಃಪತನ'

ಶಿಡ್ಲಘಟ್ಟ: ಭೂಗಳ್ಳರ ಪ್ರವೇಶದಿಂದಾಗಿ ಹದಗೆಡುತ್ತಿರುವ ರಾಜಕಾರಣ ತನ್ನ ಘನತೆ ಕಳೆದುಕೊಳ್ಳುತ್ತಿದ್ದು ಚುನಾವಣೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ನೈತಿಕ ಮೌಲ್ಯಗಳು ಕುಸಿಯುತ್ತಿವೆ ಎಂದು ಶಾಸಕ ವಿ. ಮುನಿಯಪ್ಪ ತಿಳಿಸಿದರು.  ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಗಳಲ್ಲಿ ಉತ್ತಮ ಸಚ್ಚಾರಿತ್ರಿಕ ಸೇವಾ ಮನೋಭಾನೆಯುಳ್ಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆರಿಸಬೇಕೆಂದು ಕರೆ ನೀಡಿದರು.  ಮಂಜುನಾಥ ರೆಡ್ಡಿ, ಕೋಚಿಮುಲವ್ ನಿರ್ದೇಶಕ ಕೆ. ಗುಡಿಯಪ್ಪ ಮಾತನಾಡಿದರು.  ಸತೀಶ್,  ಸರಸ್ವತಮ್ಮ ತಮ್ಮಣ್ಣ, ಹೆಚ್.ಎಮ್. ಮುನಿಯಪ್ಪ, ಮುನಿಕಷ್ಣಪ್ಪ, ಬೈರೇಗೌಡ, ಜಯಮ್ಮ ಮುನಿಯಪ್ಪ ಇದ್ದರು.
ರವಿಕುಮಾರ್ ಆಯ್ಕೆ
ಗೌರಿಬಿದನೂರು:  ಗೌರಿಬಿದನೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ. ಶಮೀಮ್‌ತಾಜ್ ಅವರ ವಿರುದ್ಧ ಬಂದಿರುವ 9 ಗುರುತರ ಆರೋಪಗಳನ್ವಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಬಿ. ಪಟಗಾರ್ ಆದೇಶದಂತೆ ಚಿಕ್ಕಬಳ್ಳಾಪುರ ಡಿಡಿಪಿಐ ಅಜಿತ್‌ಪ್ರಸಾದ್ ಗುರುವಾರ ಸ್ಥಳೀಯ ಬಿಇಒ ಕಚೇರಿಗೆ ಆಗಮಿಸಿ ಶಮೀಮ್‌ತಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದರು. ಅಲ್ಲದೆ, ಅವರ ಸ್ಥಾನಕ್ಕೆ ಗುಡಿಬಂಡೆ ಬಿಇಒ ರವಿಕುಮಾರ್ ಅವರನ್ನು ಪ್ರಭಾರ ಶಿಕ್ಷಣಾಧಿಕಾರಿಗಳನ್ನಾಗಿ ನೇಮಿಸಿದ್ದಾರೆ. ಶಮೀಮ್‌ತಾಜ್ ಮೇಲಿನ ಆರೋಪಗಳು ಆಧಾರ ಸಹಿತವಾಗಿರುವುದರಿಂದ ವಿಚಾರಣೆ ಕಾಯ್ದಿರಿಸಿ ಅಮಾನತಿನಲ್ಲಿ ಇಡುವಂತೆ ಶಿಫಾರ್ಸು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿದ್ಯುತ್‌ಗೆ ಆಗ್ರಹ
ಗುಡಿಬಂಡೆ: ತಾಲೂಕಿನಲ್ಲಿ ರೈತರು ಬೆಳೆಯುತ್ತಿರುವ ತೋಟಗಾರಿಕೆ ಬೆಳೆಗಳು ವಿದ್ಯುತ್ ಅಭಾವದಿಂದ ಒಣಗುತ್ತಿವೆ. ಇದರಿಂದ ಅಪಾರ ನಷ್ಟ ಉಂಟಾಗುತ್ತಿದ್ದು ಇಲಾಖೆ ಈ ಕೂಡಲೇ ರೈತರ ಪಂಪ್‌ಸೆಟ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ. ಬೆಳೆ ತೆಗೆಯಲು ಬಹಳಷ್ಟು ರೈತರು ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದು ವಿದ್ಯುತ್ ಕೊರತೆ ಕಾಡುತ್ತಿದೆ. ಪ್ರಸ್ತುತ ಇಲಾಖೆ ದಿನಕ್ಕೆ ಕೇವಲ ಆರು ಗಂಟೆಗಳ ಕಾಲ ಮಾತ್ರ ತ್ರಿಫೇಸ್ ವಿದ್ಯುತ್ ನೀಡುತ್ತಿದೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ನಗದು ಕಳವು
ಚಿಂತಾಮಣಿ:  ಒಬ್ಬಂಟಿ ಮಹಿಳೆ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿ, ಸಾವಿರಾರು ರು. ನಗದು ದೋಚಿರುವ ಘಟನೆ ನಗರದಲ್ಲಿ ನಡೆದಿದೆ. ಆಜಾದೌ ಚೌಕ್ ವೃತ್ತದ ಬಳಿಯ ಗೋಷಾಗಲ್ಲಿಯ ನಿವಾಸಿ ತಜ್ಜುನ್ ಅಮೀರ್ ಎಂಬವರು ಮನೆಯಲ್ಲಿ ಇದ್ದಾಗ ಮಂಜುನಾಥ್ ಎಂಬಾತ ಮನೆಗೆ ನುಗ್ಗಿ 20000 ದೋಚಿ ಪರಾರಿಯಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!