ಕೋಲಾರ

148 ಉಮೇದುವಾರಿಕೆ

ಕೊನೆದಿನ ಶನಿವಾರ 64 ಮಂದಿ ನಾಮಪತ್ರ ಸಲ್ಲಿಕೆ
ಬಂಗಾರಪೇಟೆ:  ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆ ದಿನವಾದ ಶನಿವಾರ ಇಲ್ಲಿನ ಪುರಸಭೆಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತರಾತುರಿಯಲ್ಲಿ ಆಗಮಿಸಿ, ಉಮೇದುವಾರಿಕೆ ಸಲ್ಲಿಸಿದರು.
ನಿನ್ನೆಯವರೆಗೂ 84 ನಾಮಪತ್ರ ಸಲ್ಲಿಕೆಯಾಗಿದ್ದು, ಕೊನೆ ದಿನ ಶನಿವಾರ 64 ಮಂದಿ ಸಲ್ಲಿಸಿದ್ದರಿಂದ ಒಟ್ಟು ಸಂಖ್ಯೆ 148ಕ್ಕೆ ಏರಿಕೆಯಾಗಿದೆ. ಶನಿವಾರ ಈಡೀ ದಿನ ಪೊಲೀಸರು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಬೆವರಿಳಿಸುವ ಪರಿಸ್ಥಿತಿ, ಕಾಂಗ್ರೆಸ್ ಪಕ್ಷದ ಎಲ್ಲಾ ವಾರ್ಡಿನ ಅಭ್ಯರ್ಥಿಗಳು ಒಟ್ಟಾಗಿ ತಮಟೆ, ಪಟಾಕಿ ಸಮೇತ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
ನಂತರ ಮಾಜಿ ಶಾಸಕ ವೆಂಕಟಮುನಿಯಪ್ಪ, ಎಂ.ರಾಮಚಂದ್ರ, ಹಾಲಿ ಶಾಸಕ ಎಂ.ನಾರಾಯಣಸ್ವಾಮಿ ತಮ್ಮ ಬೆಂಬಲಿಗರ ಜತೆಗೂಡಿ ಬಂದು ತಮ್ಮ ಅಭ್ಯರ್ಥಿಗಳ 'ಬಿ' ಫಾರಂಗಳನ್ನು ಸಲ್ಲಿಸಿದ ವೇಳೆ ಕಚೇರಿಯೊಳಗೆ ನೂಕುನುಗ್ಗಲು ಉಂಟಾಗಿ ಕೆಲಕಾಲ ಗೊಂದಲದ ಗೂಡಾಗಿತ್ತು.
ಶುಕ್ರವಾರದವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಗಿತ್ತು. ಶನಿವಾರ ಮಧ್ಯಾಹ್ನದವರೆಗೂ ತಿಕ್ಕಾಟದಲ್ಲೆ ಇದ್ದರು.
ನಂತರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಖಂಡ ಎಸ್.ಎನ್. ನಾರಾಯಣಸ್ವಾಮಿ ನೇತೃತ್ವದಲ್ಲಿ ಒಂದಾಗಿ ಬಂದು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ರಾಜ್ಯಮಟ್ಟದಲ್ಲಿ ಸಚಿವರು ಶಾಸಕರು ರಾಜಿನಾಮೆ ಪರ್ವ ಆರಂಭವಾಗಿರುವಂತೆಯೇ ಪುರಸಭೆ ಚುನಾವಣೆಯಿಂದಾಗಿ ಸ್ಥಳೀಯ ಮಟ್ಟದ ರಾಜಕೀಯದಲ್ಲೂ ಅಲ್ಲೋಲ ಕಲ್ಲೋಲ ಉಂಟಾಗಿದೆ. ಯಾರು ಯಾವ ಪಕ್ಷದಲ್ಲಿದ್ದಾರೆ? ಯಾವ ಪಕ್ಷದಲ್ಲಿ ಇರುತ್ತಾರೆ? ಎಂಬುದರ ಜಾಡು ತಿಳಿಯದೆ ಟಿಕೆಟ್ ಹಂಚಿಕೆಯಲ್ಲಿ ಪ್ರಧಾನ ಪಾತ್ರ ವಹಿಸುವ ಆಯಾ ಪಕ್ಷದ ಪ್ರಭಾವಿ ನಾಯಕರು, ಶಾಸಕರು ಕಂಗಾಲಾಗಿದ್ದಾರೆ.
ಇಲ್ಲಿನ ಪುರಸಭೆ ಚುನಾವಣೆಗೆ ರಾಜಕೀಯ ಪಕ್ಷಗಳಿಂದ ಜಂಗೀಕುಸ್ತಿಗೆ ಅಖಾಡ ರೆಡಿಯಾಗಿದೆ. ಹಿಂದೆಂದಿಗಿಂತಲೂ ಹೆಚ್ಚು ಆಕಾಂಕ್ಷಿಗಳನ್ನು ರಾಜಕೀಯ ಪಕ್ಷಗಳು ಎದುರಸುತ್ತಿದ್ದು, ಯಾರನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಯುವುದೇ ಮುಖಂಡರಿಗೆ ದೊಡ್ಡ ಪೀಕಲಾಟ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೆ ಕೊನೆ ಗಳಿಗೆಯಲ್ಲಿ ವಾರ್ಡ್ ನಂ.6ರ ಮೇಸ್ತ್ರಿ ನಾರಾಯಣಪ್ಪ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, 9ನೇ ವಾರ್ಡಿನಿಂದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಸಿರಾಜ್ ಪಾಷ ಜೆಡಿಎಸ್ ಟಿಕೆಟ್ ಪಡೆದು ಕಣಕ್ಕೆ ಇಳಿದಿದ್ದಾರೆ. ವಾರ್ಡ್ ನಂ 1ರಲ್ಲಿ ಕಾಂಗ್ರೆಸ್ನ ಸ್ವಾಮಿಕಣ್ಣು ಎಐಎಡಿಎಂಕೆಯಿಂದ ಸ್ಪರ್ಧಿಸಿದ್ದಾರೆ.
ವಿಧಾನಸಭೆ ಚುನಾವಣೆ ತೀರಾ ಹತ್ತಿರದಲ್ಲಿರುವುದರಿಂದ ಮೂರು ಪಕ್ಷಗಳ ನಾಯಕರಿಗೆ ಈ ಚುನಾವಣೆಯಲ್ಲಿ ಪಾಲ್ಗೊಳ್ಳಲು ಇಷ್ಟವಿಲ್ಲದಿದ್ದರೂ ತಮ್ಮ ಬೆಂಬಲಿಗರನ್ನು ಅನಿವಾರ್ಯವಾಗಿ ಗೆಲ್ಲಿಸಿಕೊಳ್ಳಬೇಕಿದೆ.ಇಲಲ್ದಿದ್ದರೆ ಅದರ ನೇರ ಪರಿಣಾಮ ವಿಧಾನಸಭೆ ಚುನಾವಣೆ ಮೇಲಾಗುತ್ತದೆ ಹಾಹಾಗಿ ಅತ್ತ ದರಿ ಇತ್ತ ಪುಲಿ ಎಂಬ ಸ್ಥಿತಿ ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!