ಕೋಲಾರ

55 ನಾಮಪತ್ರ ತಿರಸ್ಕೃತ

ಮಾಲೂರು: ಪಟ್ಟಣದ ಪುರಸಭೆಯ 23 ವಾರ್ಡ್‌ಗಳು ಸದಸ್ಯತ್ವಕ್ಕಾಗಿ ಮಾ. 7ರಂದು ನಡೆಯಲಿರುವ ಚುನಾವಣೆಗಾಗಿ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಸೋಮವಾರ ನಡೆದಿದ್ದು, 55 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದೆ. ಪುರಸಭೆಯ 23 ವಾರ್ಡ್‌ಗಳಿಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ರಾಮೇಗೌಡ ಬಣ ಸೇರಿದಂತೆ ವಿವಿಧ ಪಕ್ಷಗಳಿಂದ ಸಲ್ಲಿಸಲಾಗಿದ್ದ 187 ಅಭ್ಯರ್ಥಿಗಳಲ್ಲಿ ಬಿ ಫಾರಂ ಕೊರತೆ ಸೇರಿದಂತೆ ಇತರೆ ತಾಂತ್ರಿಕ ದೋಷವಿದ್ದ ವಿವಿಧ ಪಕ್ಷಗಳ 55 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಯಿತು.  ಬಿಜೆಪಿ, ಜೆಡಿಎಸ್ ಹಾಗೂ ರಾಮೇಗೌಡ ಬಣವು ಸ್ಪರ್ಧಿಸುತ್ತಿರುವ ಎಲ್ಲ 23 ವಾರ್ಡ್‌ಗಳ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿದ್ದು, 22 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿದ್ದು, ವಾರ್ಡ್ ನಂ 18 ರಲ್ಲಿ ಅಭ್ಯರ್ಥಿ ಹಾಕಲು ವಿಫಲವಾಗಿದೆ. ಒಟ್ಟು 132 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಬುಧವಾರ ಕೊನೆಯ ದಿನವಾಗಿದೆ.
30 ಅರ್ಜಿಗಳು ಅಸಿಂಧು
ಗುಡಿಬಂಡೆ: ಮಾ.7 ರಂದು ನಡೆಯಲಿರುವ ಪಟ್ಟಣ ಪಂಚಾಯತಿ ಚುನಾವಣೆಗೆ 108 ನಾಮಪತ್ರ ಅರ್ಜಿಗಳು ಸಲ್ಲಿಸಿದ್ದು, ಅವುಗಳಲ್ಲಿ 78 ನಾಮಪತ್ರ ಅರ್ಜಿಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಅಧಿಕಾರಿ ವೈ.ಸಿ. ರವಿಕುಮಾರ್ ತಿಳಿಸಿದ್ದಾರೆ. ಈ ಪೈಕಿ 1ನೇ ವಾರ್ಡಿನಿಂದ 8ಅಭ್ಯರ್ಥಿಗಳು, 2ನೇ ವಾರ್ಡಿನಿಂದ 5 ಅಭ್ಯರ್ಥಿಗಳು, 3ನೇ ವಾರ್ಡಿನಿಂದ 9 ಅಭ್ಯರ್ಥಿಗಳು, 4ನೇ ವಾರ್ಡಿನಿಂದ 8 ಅಭ್ಯರ್ಥಿಗಳು, 5ನೇ ವಾರ್ಡಿನಿಂದ 5 ಅಭ್ಯರ್ಥಿಗಳು, 6ನೇ ವಾರ್ಡಿನಿಂದ 4  ಅಭ್ಯರ್ಥಿಗಳು, 7ನೇ ವಾರ್ಡಿನಿಂದ 8 ಅಭ್ಯರ್ಥಿಗಳು, 8ನೇ ವಾರ್ಡಿನಿಂದ 5 ಅಭ್ಯರ್ಥಿಗಳು, 9ನೇ ವಾರ್ಡಿನಿಂದ 8 ಅಭ್ಯರ್ಥಿಗಳು, 10ನೇ ವಾರ್ಡಿನಿಂದ 10 ಅಭ್ಯರ್ಥಿಗಳು, 11ನೇ ವಾರ್ಡಿನಿಂದ 8 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಬಸ್ ಡಿಕ್ಕಿ: ಬೈಕ್ ಸವಾರಗೆ ಗಾಯ
ಚಿಂತಾಮಣಿ: ಕೆಎಸ್ಸಾರ್ಟಿಸಿ ಬಸ್ಸೊಂದು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಟಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕುರುಟಹಳ್ಳಿ ಗ್ರಾಮದ ಬಳಿ ಚಿಂತಾಮಣಿ ಕೋಲಾರ ಮಾರ್ಗವಾಗಿ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕೂಡಲೇ ಆತನನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರನ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!