ಕೋಲಾರ

ಪೊಲೀಸ್ ಮನೆಯಲ್ಲಿ ಕಳವು, ಪೊಲೀಸರ ಮೇಲೇ ಅನುಮಾನ!

ಚಿಕ್ಕಬಳ್ಳಾಪುರ: ಪೊಲೀಸರ ಮನೆಯಲ್ಲಿ ಹಾಡಹಗಲೇ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ ಈ ಕಳ್ಳತನದ ಹಿಂದೆ ಪೊಲೀಸರ ಕೈವಾಡ ಇರಬಹುದೆಂಬ ಅನುಮಾನ ವ್ಯಕ್ತವಾಗಿರುವುದು ವಿಶೇಷವಾಗಿದೆ.
ನಗರದ ಪ್ರಶಾಂತ ನಗರದ ಪೊಲೀಸ್ ಕ್ವಾಟರ್ಸ್ನ ಬಿ 1 ಬ್ಲಾಕ್ ಕಟ್ಟಡದ ಮಹಡಿಯಲ್ಲಿರುವ ಮುಖ್ಯ ಪೇದೆ ಅಲ್ತಾಫ್ ಪಾಷಾ ಚಿನ್ನಾಭರಣ ಕಳೆದುಕೊಂಡವರು. ಪ್ರಕರಣ ನಡೆದು ಒಂದು ವಾರ ಕಳೆಯುತ್ತಿದ್ದರೂ ತನಿಖೆ ಚುರುಕಾಗಿ ನಡೆಯದ ಕಾರಣ ಇದೀಗ ಜಿಲ್ಲಾ ರಕ್ಷಣಾಧಿಕಾರಿಗಳ ಮೊರೆ ಹೋಗಿದ್ದಾರೆ.
ಘಟನೆ ಹಿನ್ನೆಲೆ: ಅಲ್ತಾಫ್ ಪಾಷಾರವರ ಪತ್ನಿ ಶಾಜೀಯಾ ಕೌಸರ್  ಜು.28 ರಂದು ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಹೋಗುವ ಸಂದರ್ಭದಲ್ಲಿ ತಮ್ಮ ಮನೆಯ ಬೀಗದ ಕೈಯನ್ನು ಎದುರು ಮನೆಯ ಮುಖ್ಯಪೇದೆ ಗಿರೀಶ್ ಎಂಬುವರ ಪತ್ನಿ ಲಕ್ಷ್ಮೀರವರ ಕೈಗೆ ಕೊಟ್ಟು ಹೋಗಿದ್ದರು. ನಂತರ ಮಧ್ಯಾಹ್ನ 3 ಗಂಟೆಗೆ ಬೀಗದ ಕೈಯನ್ನು ಪಡೆದು ಮನೆಗೆ ಬಂದಿದ್ದಾರೆ. ಸಂಜೆ 5 ಗಂಟೆಗೆ ರಂಜಾನ್  ಹಬ್ಬಕ್ಕಾಗಿ ನೆಂಟರ ಮನೆಗೆ ತೆರಳಲು ಬೀರುವಿನಲ್ಲಿದ್ದ ಒಡವೆ ನೋಡಿದಾಗ ಅವು ನಾಪತ್ತೆಯಾಗಿವೆ. ತಕ್ಷಣ ಪತಿಗೆ ಮಾಹಿತಿ ಕೊಟ್ಟಿದ್ದು ಅಲ್ತಾಫ್ ಪಾಷಾ ಮನೆಯ ಸಮೀಪದಲ್ಲಿಯೇ ಇರುವ ನಗರ ಠಾಣೆಗೆ ದೂರು ನೀಡಿದ್ದಾರೆ.
ಖಾಕಿ ಮೇಲೆ ಅನುಮಾನ: ಮನೆಯೊಳಗಿದ್ದ ಬೀರು ಬೀಗ ಹಾಕಿದಂತೆಯೇ ಇದೆ. ಆದರೆ, ಬೀರುವಿನಲ್ಲಿದ್ದ ಒಡವೆಗಳು ಕಳವಾಗಿವೆ. ಮನೆಯ ಸುತ್ತಮುತ್ತಲು ಪೊಲೀಸರ ಮನೆಗಳೇ ಇವೆ. ಜೊತೆಗೆ ಮನೆಯ ಬೀಗ ಒಡೆದಿಲ್ಲ. ಇದರಿಂದ ಪರಿಚಯದವರೇ ಆದ ಪೊಲೀಸನವರೇ ನಕಲಿ ಬೀಗದ ಕೈ ಬಳಸಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸುವ ಅಲ್ತಾಫ್ ಪಾಷಾ, ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ಘಟನೆಯ ವಿವಿರ ತಂದಿದ್ದು, ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!