ಕೋಲಾರ

ಮಾರುಕಟ್ಟೆ ಪರವಾನಿಗೆ ರದ್ದು

ಮುಳಬಾಗಲು: ತಾಲೂಕಿನ ಕಪ್ಪಲಮೊಡಗು ಗ್ರಾಮದ ಬಳಿ ಇರುವ ಎಂಜಿ ಹೋಲ್ಸೇಲ್ ಖಾಸಗಿ ಮಾರುಕಟ್ಟೆಗೆ ನೀಡಲಾಗಿದ್ದ ಪರವಾನಿಗೆಯನ್ನು ಕೃಷಿ ಮಾರಾಟ ಇಲಾಖೆ ನಿರ್ದೇಶಕರು ರದ್ದುಪಡಿಸಿದ್ದಾರೆಂದು ಕೃಷಿ ಉತ್ಪನ್ನಗಳ ಮಾರುಕಟ್ಟಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್, ಕಾರ್ಯದರ್ಶಿ ಎಂ. ಕೃಷ್ಣನ್ ಬುಧವಾರ ತಿಳಿಸಿದ್ದಾರೆ. ಸದರಿ ಮಾರುಕಟ್ಟೆ ಯಾರ್ಡ್ನಲ್ಲಿ ರೈತರು ಯಾವುದೇ ಚಟುವಟೆಕೆ ನಡೆಸುವಂತಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಂಗಾರುತಿರುಪತಿಯಲ್ಲಿ ಶ್ರಾವಣ ಮಾಸದ ಪೂಜೆ
ಬಂಗಾರಪೇಟೆ: ಎರಡನೇ ತಿರುಪತಿ ಎಂದೇ ಇತಿಹಾಸಿಕ ಪ್ರಸಿದ್ದಿಯಾಗಿರುವ ತಾಲೂಕಿನ ಬಂಗಾರುತಿರುಪತಿ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಧಾರ್ಮಿಕ ಕಾರ್ಯಗಳು ಆರಂಭಗೊಂಡಿವೆ. ಪಟ್ಟದಿಂದ 20ಕಿ.ಮೀ ದೂರದ ಈ ದೇವಾಲಯಕ್ಕೆ ಕೆಜಿಎಫ್, ಮುಳಬಾಗಿಲು ಮತ್ತು ಕೋಲಾರದಿಂದ ನೇರ ಬಸ್ ಸೌಭ್ಯಗಳಿವೆ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಕಮ್ಮಸಂದ್ರ ಕೋಟಿಲಿಂಗಗಳ ದೇವಾಲಯದಿಂದ ಸುಮಾರು 6ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷದ ಶ್ರಾವಣ ಮಾಸ, ಮಾಘಮಾಸದ ಮತ್ತು ಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಜಾತ್ರೆಗಳು, ತಪೋತ್ಸವಗಳು ನಡೆಯುತ್ತವೆ. ಇದಲ್ಲದೆ ಈ ಭಾಗದ ಜನರು ಹರಕೆಗೆ ಹಾಗೂ ಮಕ್ಕಳ ಮೊದಲ ಮುಡಿಯನ್ನು ಇಲ್ಲಿ ನೀಡುವ ಪದ್ಧತಿ ಹಿಂದಿನಿಂದಲೂ ನಡೆದುಬಂದಿದೆ. ಭಕ್ತರು ನೀಡುವ ಮುಡಿಯಿಂದ ದೇವಾಲಯಕ್ಕೆ ಪ್ರತಿ ವರ್ಷ ರು.   25ಲಕ್ಷ ಆದಾಯವಿದೆ. ಬಂಗಾರು ತಿರುಪತಿಯಲ್ಲಿ ದೇವರನ್ನು ಕಿಂಡಿಯ ಮೂಲಕವೇ ದರ್ಶನ ಮಾಡಬೇಕು. ಬೆಟ್ಟದ ಮೇಲಿರುವ ಈ ದೇವಾಲಯ ಗರುಡ ವಾಹನ ಹೊತ್ತಿಕೊಂಡಿರುವಂತೆ ಇದೆ. ಅಲ್ಲದೆ ಭ್ರಹ್ಮಾಂಡ ಪುರಾಣಗಳಲ್ಲಿ ಭರತ ಖಂಡದ 108 ತಿರುಪತಿ ಕ್ಷೇತ್ರಗಳಲ್ಲಿ ಈ ಕ್ಷೇತ್ರ ಇಂದು ಪ್ರವಿತ್ರ ಕ್ಷೇತ್ರವಾಗಿ ಭಕ್ತಾಧಿಗಳನ್ನು ಸೆಳೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ