ಕೊಪ್ಪಳ: ವರ್ಷದ ಹಿಂದೆ ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಎಲ್ಲ ಎಪಿಎಂಸಿಗಳಲ್ಲಿ ರೈತಗೀತೆ ಬರೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿವರೆಗೆ ಕೊಪ್ಪಳ ಎಪಿಎಂಸಿ ಕಚೇರಿ ಸೇರಿದಂತೆ ಯಾವ ಎಪಿಎಂಸಿಗಳಲ್ಲೂ ರೈತಗೀತೆ ಬರೆಸಿಲ್ಲ.
ಕೊಪ್ಪಳ ಎಪಿಎಂಸಿ ನೂತನ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಮಲ್ಲಪ್ಪ ಅವರು ರಾಜ್ಯ ಸರ್ಕಾರದ ಗಮನಕ್ಕೆ ತಂದು ಎಪಿಎಂಸಿ ಆವರಣದಲ್ಲಿ ರೈತಗೀತೆ ಬರೆಸಲು ಶ್ರಮಿಸಬೇಕು ಎಂದು ವಕೀಲ ವಿಜಯ ಅಮೃತರಾಜ್ ಆಗ್ರಹಿಸಿದ್ದಾರೆ.