ಕೊಪ್ಪಳ: ನಗರದ ಶ್ರೀ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತಕ್ಕೆ ಇತ್ತೀಚಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಜಿ.ಎಸ್. ಗೋನಾಳ ಹಾಗೂ ಉಪಾಧ್ಯಕ್ಷರಾಗಿ ಎಂ.ಎಚ್. ಪಾಟೀಲ್ ಅವಿರೋಧ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.
ಎಸ್.ಬಿ. ನಾಗರಹಳ್ಳಿ, ಪ್ರಭು ಹೆಬ್ಬಾಳ, ವಿ.ಜಿ. ಯತ್ನಳ್ಳಿ, ಸಂಗಪ್ಪ ವಕ್ಕಳದ, ವಿ.ಎಲ್. ಹಿರೇಗೌಡರ, ಜಿ.ಎಚ್. ಪಾಟೀಲ್. ಎಸ್.ಡಿ. ಡಂಬಳ, ವಿಜಯಲಕ್ಷ್ಮಿ ಶರಣಗೌಡ್ರು, ಬಿ. ಶರಣಪ್ಪ ಉಪಸ್ಥಿತರಿದ್ದರು ಎಂದು ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಜಿ.ಎಸ್. ಗೋನಾಳ ಅವರನ್ನು ಮುಖಂಡರು ಅಭಿನಂದಿಸಿದರು.