ಕೊಪ್ಪಳ

ಕಾರಟಗಿ: ಅಕ್ಕಿ ಮಾರಾಟ ಕೇಂದ್ರ ಆರಂಭ

ಕಾರಟಗಿ: ಗಗನಮುಖಿಯಾಗಿದ್ದ ಅಕ್ಕಿಯ ಬೆಲೆಯನ್ನು ನಿಯಂತ್ರಿಸುವ ಹಾಗೂ ಸಾಮಾನ್ಯ ಜನತೆಯ ಕೈಗೆಟಕುವ ದರದಲ್ಲಿ ಅಕ್ಕಿ ದೊರೆಯಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಕ್ಕಿ ಮಾರಾಟ ಕೇಂದ್ರ ಆರಂಭಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅಕ್ಕಿ ಬೆಲೆ ಏರುತ್ತಲೆ ಇದೆ. ಸರ್ಕಾರದಿಂದಲೂ ಬೆಲೆ ನಿಯಂತ್ರಣ ಸಾಧ್ಯವಾಗಲಿಲ್ಲ. ಅಲ್ಲದೆ, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿದ್ದು ಸಹಜವಾಗೇ ಬೆಲೆ ಏರಿದೆ. ಈ ಕುರಿತು ಗಂಭೀರ ಚಿಂತನೆ ನಡೆಸಿದ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ಮಾರಾಟ ಮಾಡಲು ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಮೊಟ್ಟಮೊದಲ ಅಕ್ಕಿ ಮಾರಾಟ ಕೇಂದ್ರ ಪ್ರಾರಂಭಿಸಿದೆ.
ಜಿಲ್ಲಾಧಿಕಾರಿ ಇತ್ತೀಚೆಗೆ ಕೊಪ್ಪಳದಲ್ಲಿ ಅಕ್ಕಿ ಗಿರಣಿ ಮಾಲೀಕರೊಂದಿಗೆ ಸಭೆ ನಡೆಸಿ ಕಾರಟಗಿಯಲ್ಲಿ ಅಕ್ಕಿ ಗಿರಣಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಕಡಿಮೆ ಬೆಲೆಯಲ್ಲಿ ಅಕ್ಕಿ ಮಾರಾಟ ಕೇಂದ್ರವನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಶನಿವಾರ ಇಲ್ಲಿನ ರೈಸ್‌ಮಿಲ್ ಅಸೋಸಿಯೇಷನ್ ಕಟ್ಟಡದಲ್ಲಿ ಅಕ್ಕಿ ಸಂತೆ ಪ್ರಾರಂಭಿಸುವ ಮೂಲಕ ಎಲ್ಲರನ್ನೂ ಕಾಡುತ್ತಿದ್ದ ಬೆಲೆ ಏರಿಕೆ ಚಿಂತೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತಾಗಿದೆ. ಕೇಂದ್ರವನ್ನು ಡಿಸಿ  ತುಳಸಿ ಮದ್ದಿನೇನಿ ಉದ್ಘಾಟಿಸಿ ಅಕ್ಕಿಯ ಗುಣಮಟ್ಟ ಪರಿಶೀಲಿಸಿದರು. ಕೆಲವು ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಿದರು.
ಕೇಂದ್ರದಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್‌ದಾರರಿಗೆ ಸ್ವರ್ಣ ಮಸೂರಿ ರಾರೈಸ್ ಅಕ್ಕಿ ಪ್ರತಿ ಕೆಜಿಗೆ ರು. 25, ಸೋನಾ ಮಸೂರಿ ರಾರೈಸ್ ಅಕ್ಕಿ ಪ್ರತಿಕೆಜಿಗೆ ರು. 35 ನಿಗದಿಪಡಿಸಿದೆ.  ಬಿಪಿಎಲ್, ಎಪಿಎಲ್ ಕಾರ್ಡ್‌ದಾರರಿಗೆ 25 ಕೆಜಿ ಅಕ್ಕಿ ಸಿಗಲಿದೆ ಎಂದು ಡಿಸಿ ತುಳಸಿ ಮದ್ದಿನೇನಿ ಹೇಳಿದರು.
ಅಕ್ಕಿ ಬೆಲೆ ರು. 50ಗೆ ತಲುಪಿದ್ದು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಸಾಮಾನ್ಯ ವರ್ಗದವರು, ಬಡ ಕೂಲಿಕಾರರಿಗೆ ಅಕ್ಕಿ ಖರೀದಿಸಲು ಸಾಧ್ಯವಿಲ್ಲದಂತಾಗಿದೆ. ಅಕ್ಕಿಗಿರಣಿಗಳು ನಷ್ಟದಲ್ಲಿವೆ. ರೈತರು ತಮ್ಮ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದೆ ಕೃಷಿ ಕೈಬಿಡುವ ಸ್ಥಿತಿ ತಲುಪಿದ್ದಾರೆ. ಇವರೆಲ್ಲರ ನಡುವೆ ಕೆಲವು ಸ್ವಾರ್ಥಿಗಳು ಲಾಭ ಮಾಡಿಕೊಳ್ಳುತ್ತಿದ್ದು, ಆದ್ದರಿಂದಲೇ ಅಕ್ಕಿಗಿರಣಿಗಳ, ಜಿಲ್ಲಾಡಳಿತದ ಸಹಯೋಗದಲ್ಲಿ ಅಕ್ಕಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಅಕ್ಕಿ ಬೆಲೆ ಏರಿಕೆನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರವೇ ಅಕ್ಕಿಗಿರಣಿಗಳ ಸಹಕಾರದಿಂದ ಕಡಿಮೆ ಬೆಲೆಗೆ ಅಕ್ಕಿ ಮಾರುವ ಕೇಂದ್ರಗಳನ್ನು ಸ್ಥಾಪಿಸಿ ಜನತೆಯ ನೆರವಿಗೆ ಮುಂದಾಗಿದೆ ಎಂದರು.
ಕಾರಟಗಿ ಅಕ್ಕಿ ಗಿರಿಣಿ ಮಾಲಿಕರ ಸಂಘದ ಅಧ್ಯಕ್ಷ ಲಿಂಗಪ್ಪ ಸುಂಕದ ಉದ್ಯಮದ ಕಷ್ಟ ತಿಳಿಸಿದರು. ಸಿ. ಶಿವಪ್ಪ ನಿರೂಪಿಸಿದರು. ಆಹಾರ, ನಾಗರಿಕ ಪೂರೈಕೆ ಇಲಾಖೆ ಅಶೋಕ ಕಲಘಟಗಿ, ಕಾರಟಗಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಉದ್ಯಮಿ ಪ್ರಹ್ಲಾದ್ ಶೆಟ್ಟಿ, ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!