ಕೊಪ್ಪಳ

ಸ್ಮಶಾನದಂತಾದ ಸಿದ್ನೆಕೊಪ್ಪ, ಬಿನ್ನಾಳ

ಕುಕನೂರ: ಗದಗ ತಾಲೂಕು ಹುಲಕೋಟಿ ಸಮೀಪ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸತ್ತವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಸಿದ್ನೆಕೊಪ್ಪ ಹಾಗೂ ಬಿನ್ನಾಳ ಗ್ರಾಮಗಳಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಶುಕ್ರವಾರ ಬೆಳಗ್ಗೆ 9 ಗಂಟೆಗೆ ತುರ್ತು ವಾಹನದಲ್ಲಿ ಮೃತ ದೇಹಗಳು ಸಿದ್ನೆಕೊಪ್ಪಕ್ಕೆ ಬಂದಾಗ ದುಃಖ ತಡೆಯದೆ ಕೆಲವರು ಮೂರ್ಛೆ ಹೋದರು. ಗ್ರಾಮಸ್ಥರ ಕಣ್ಣಂಚಿನಲ್ಲೂ ನೀರು ಜಿನುಗಿತು.
ತಳವಾರ ಈರಮ್ಮ ಕಟ್ಟಿ (70), ಬಾರಕೇರ ಸೀತಮ್ಮ ಬೇಟಗೇರಿ (40), ಪಾರ್ವತೆಮ್ಮ ಬಾರಕೇರ (70), ರೇಣವ್ವ ಸೋಮಪ್ಪ ಮನಗೂಳಿ (38), ಶಾಂತವ್ವ ಕಳಕಪ್ಪ ಮನಗೂಳಿ (35), ಶಾಂತವ್ವ ಮುದಕಪ್ಪ ಮನಗೂಳಿ (70), ಮಂಜಪ್ಪ ಮುತ್ತಾಳ (25), ಹನುಮಂತ ತೊಂಡಿಹಾಳ (23), ಕಳಕಪ್ಪ ಮನಗೂಳಿ (25), ದೇವಮ್ಮ ಪರಸಪ್ಪ ತೊಂಡಿಹಾಳ (50), ಸಿದ್ದಮ್ಮ ಬಸಪ್ಪ ಮನಗೂಳಿ (60), ಬಿನ್ನಾಳ ಗ್ರಾಮದ ಲಕ್ಷ್ಮವ್ವ ಬಸಪ್ಪ ಮನಗೂಳಿ (40), ಸಾವಿತ್ರವ್ವ ಶರಣಪ್ಪ ಬಾರಕೇರ (25), ಸಿದ್ನೇಕೊಪ್ಪದ ಶಿವಗಂಗಮ್ಮ ಪ್ರಕಾಶ ಮನಗೂಳಿ (25), ಪುತ್ರ ಸಿದ್ಧಾರ್ಥ (2) ಮೃತ ದುರ್ದೈವಿಗಳು. ಶುಕ್ರವಾರ ಚಿಕಿತ್ಸೆ ಫಲಿಸದೆ ಮೃತಪಟ್ಟವರಲ್ಲಿ ಭೀಮಾಂಬಿಕೆ (10), ಸುಮಿತ್ರಾ ಶರಣಪ್ಪ ಹೈದ್ರಿ (35) ಹಾಗೂ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನೂ ಎಂಟು ಗಾಯಾಳುಗಳು ಕಿಮ್ಸ್‌ನಲ್ಲಿ, ಉಳಿದವರು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ. ಟ್ರ್ಯಾಕ್ಟರ್‌ನಲ್ಲಿ ಒಟ್ಟು 51 ಜನ ಪ್ರಯಾಣಿಸುತ್ತಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬಂಧುವೊಬ್ಬರ ಮಗಳು ಋತುಮತಿಯಾಗಿದ್ದು, ಕಾರ್ಯಕ್ರಮಕ್ಕೆ ಎರಡು ಟ್ರ್ಯಾಕ್ಟರ್‌ಗಳಲ್ಲಿ ನವಲಗುಂದ ತಾಲೂಕಿನ ಉಮ್ಮಚಗಿಗೆ ಬಂದಿದ್ದರು. ಪುರುಷರೇ ಹೆಚ್ಚಿದ್ದ ಟ್ರ್ಯಾಕ್ಟರ್ ಇವರಿಗಿಂತ ಒಂದು ಕಿ.ಮೀ. ಮುಂದಿತ್ತು. ಮಹಿಳೆಯರು, ಮಕ್ಕಳಿದ್ದ ಟ್ರ್ಯಾಕ್ಟರ್‌ಗೆ ಜವರಾಯ ಹೊಂಚು ಹಾಕಿ ಕುಳಿತಿದ್ದ. ಈ ಘಟನೆಯಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಸಿದ್ನೆಕೊಪ್ಪ ಗ್ರಾಮದಲ್ಲಿ 13 ಜನರ ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಯಿತು. ಬಿನ್ನಾಳದಲ್ಲಿ ಇಬ್ಬರ ಅಂತ್ಯ ಸಂಸ್ಕಾರ ನಡೆಯಿತು.
ಹಾಲಪ್ಪ ಆಚಾರ್ ಭೇಟಿ: ಸಿದ್ನೇಕೊಪ್ಪ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಸಚಿವ ಎಚ್.ಕೆ. ಪಾಟೀಲ, ಶಾಸಕ ಬಸವರಾಜ ರಾಯರಡ್ಡಿ, ನವೀನ ಗುಳಗಣ್ಣವರ್, ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, ಯಲಬುರ್ಗಾ ತಹಸೀಲ್ದಾರ್ ಸಿ.ವಿ. ಮಡಿವಾಳರ, ಸಹಾಯಕ ಆಯುಕ್ತ ಪಿ.ಎಸ್. ಮಂಜುನಾಥ, ಕಂದಾಯ ನಿರೀಕ್ಷಕ ಉಮೇಶಗೌಡ ಮಾಲಿಪಾಟೀಲ್, ಹಸನಸಾಬ, ವೀರಣ್ಣ ತೆಗ್ಗಿನಮನಿ, ಬಸವರಾಜ ಇಟಗಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಶಾಸಕ ರಾಯರಡ್ಡಿ ಮಾತನಾಡಿ, ಘಟನೆಯಿಂದ ಇಡೀ ಗ್ರಾಮವೆ ದುಃಖದಲ್ಲಿದೆ. ಮೃತರ ಕುಟುಂಬಕ್ಕೆ ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ರು. 20 ಸಾವಿರ ಪರಿಹಾರ ವಿತರಿಸಲಾಗುವುದು. ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ರು. 1 ಲಕ್ಷ ಪರಿಹಾರಧನ ನೀಡಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!