ಕೊಪ್ಪಳ

ನಗರಸಭೆಯಿಂದ ಇತಿಹಾಸ ಮಣ್ಣುಪಾಲು

ಕೊಪ್ಪಳ: ಐತಿಹಾಸಿಕ ಸ್ಮಾರಕಗಳು ಪತ್ತೆಯಾದರೆ ಸಂರಕ್ಷಣೆ ಮಾಡಲಾಗುತ್ತದೆ. ಪುರಾತತ್ವ ಇಲಾಖೆ ಸಹಯೋಗದಲ್ಲಿ ಅವುಗಳ ಇತಿಹಾಸ ಶೋಧನೆ ಮಾಡುತ್ತಾರೆ. ಆದರೆ, ಕೊಪ್ಪಳದಲ್ಲಿ ದೊರೆತ ಐತಿಹಾಸಿಕ ಬಾಗಿಲೊಂದನ್ನು ಸಂರಕ್ಷಣೆ ಮಾಡುವ ಬದಲು ನಗರಭೆ ಪುನಃ ಮುಚ್ಚಿರುವುದು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೀಗ ಪುರಾತತ್ವ ಇಲಾಖೆ ಮೂಲಕ ಶೋಧನೆ ಮಾಡಿಸುವಂತೆ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗೂ ಎಚ್.ಎಸ್. ಪಾಟೀಲ್ ಮನವಿ ಸಲ್ಲಿಸಿದ್ದಾರೆ. ಪುರಾತತ್ವ ಇಲಾಖೆಗೂ ಪತ್ರ ಬರೆದು ಮಾಹಿತಿ ನೀಡಿ, ಶೋಧನೆ ಮಾಡುವಂತೆ ಕೋರಿದ್ದಾರೆ. ಆದರೆ, ಪತ್ತೆಯಾಗಿದ್ದ ಐತಿಹಾಸಿಕ ಕಲ್ಲಿನ ಬಾಗಿಲನ್ನು ಈಗಾಗಲೆ ನಗರಸಭೆ ಪುನಃ ಮಣ್ಣಲ್ಲಿ ಹಾಕಿ ಮುಚ್ಚಿದೆ.
ಕೊಪ್ಪಳ ನಗರದ ಕೋಟೆ ಪ್ರದೇಶದಲ್ಲಿ ಇತ್ತೀಚಿಗೆ ಒಳಚರಂಡಿ ಕಾಮಗಾರಿಗಾಗಿ ಜೆಸಿಬಿ ಮೂಲಕ ಗುಂಡಿ ತೋಡುವಾಗ ಬದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಬಾಗಿಲೊಂದು ಪತ್ತೆಯಾಗಿತ್ತು. ಇದು ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಇದೊಂದು ಪುರಾತನ ಕಾಲದ ಬಾಗಿಲು. ದ್ವಾರಬಾಗಿಲು ಕಂಡಂತೆಯೂ ಕಾಣುತ್ತಿದೆ. ಹೀಗಾಗಿ, ಇಲ್ಲಿ ಕೆಳಗಡೆ ಗ್ರಾಮವೊಂದು ಇತ್ತು ಎನ್ನುವ ಅನುಮಾನ ಬರುವಂತೆ ಇದೆ. ಶೋಧಿಸಿದರೆ ಏನಾದರೂ ಮಹತ್ವದ ಇತಿಹಾಸ ಲಭ್ಯವಾಗಬಹುದು ಎಂದು ಜನತೆ ಊಹಿಸಿದ್ದರು.
ಆದರೆ, ಇದ್ಯಾವುದರ ಪರಿವೆಯೇ ಇಲ್ಲದ ಒಳಚರಂಡಿ ಕಾಮಗಾರಿ ಗುತ್ತಿಗೆದಾರರು ಹಾಗೂ ನಗರಸಭೆ ಸಿಬ್ಬಂದಿ, ಇದು ಏಕೆ ನಮಗೆ ಬೇಕು ಎಂದು ಮರಳಿ ಮುಚ್ಚಿಹಾಕಿದ್ದಾರೆ. ಆ ಮೂಲಕ ಉತ್ಖನನವಾದ ಐತಿಹಾಸಿಕ ಪಳೆಯುಳಕೆಯೊಂದನ್ನು ಮಣ್ಣು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಕೋಟೆಯ ಕೆಳ ಭಾಗದಲ್ಲಿ ಬೌದ್ಧ ಬಿಕ್ಕುಗಳು ವಾಸವಾಗಿದ್ದರು. ಕಾಲಾಂತರದಲ್ಲಿ ಅವರನ್ನು ನಾಶ ಮಾಡಲಾಯಿತು. ಅಂಥ ಬೌದ್ಧ ಬಿಕ್ಕುಗಳ ವಾಸಸ್ಥಳ ಇರಬೇಕು. ಇಂಥದ್ದೊಂದು ಪುರಾತನ ಇತಿಹಾಸ ದೊರೆತಾಗ ಅದನ್ನು ಸಂರಕ್ಷಣೆ ಮಾಡಿ, ಶೋಧಿಸಬೇಕು. ಇದಕ್ಕಾಗಿ ನಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಕೂಡಲೇ ಪುರಾತತ್ವ ಇಲಾಖೆ ಮೂಲಕ ಶೋಧಿಸಿ, ಈ ಭಾಗದ ಇತಿಹಾಸವನ್ನು ಅರಿಯುವುದು ಉತ್ತಮ ಎಂದು ಸಾಹಿತಿ ಎಚ್.ಎಸ್. ಪಾಟೀಲ್ ತಿಳಿಸಿದ್ದಾರೆ.
--
ಅಕ್ಕಿ ಬ್ರಾಂಡ್ ನಕಲು: ಪ್ರಕರಣ ದಾಖಲು
ಕೊಪ್ಪಳ: ಗಂಗಾವತಿಯ ಮಹೇಂದ್ರ ರೈಸ್ ಕಾರ್ಪೋರೇಷನ್ ಮಾಲೀಕರು ಚನ್ನಕೇಶ್ವರ್ ರೈಸ್ ಇಂಡಸ್ಟ್ರೀಸ್‌ನ ಶ್ರೀಗಂಧ ರೈಸ್ ಬ್ರ್ಯಾಂಡ್ ನಕಲು ಮಾಡಿ ರಾಜ್ಯದ ಬೇರೆ ಬೇರೆ ಕಡೆಗೆ ಸಾಗಾಟ ಮಾಡಿ ಇಂಡಸ್ಟ್ರೀಗೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ. ಈಚೆಗೆ ಜಮಖಂಡಿಯಲ್ಲಿ ಕಳುಹಿಸಿದ ಅಕ್ಕಿ ಲೋಡ್ ಹಿಡಿದು ಜಮಖಂಡಿ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ವಿಷಯ ತಿಳಿದ ಮಹೇಂದ್ರ ರೈಸ್ ಕಾರ್ಪೋರೇಷನ್ ಮಾಲೀಕ ಗಂಗಾವತಿಯ ಸ್ವಸ್ತಿಕ್ ರೈಸ್‌ಮಿಲ್‌ನಿಂದ ಚಡಚಣಕ್ಕೆ ಸಾಗಿಸಲು ತಯಾರಿ ನಡೆಯಿಸಿದ್ದ 25 ಕೆ.ಜಿ. ತೂಕದ 605 ಅಕ್ಕಿ ಚೀಲಗಳನ್ನು ದಾಸನಾಳದ ಗುರುಸ್ವಾಮಿ ಹಿರೇಮಠ ಗೋದಾಮಿನಲ್ಲಿ ಬಚ್ಚಿಟ್ಟಿದ್ದಾರೆ. ಕಾನೂನು ಕ್ರಮ ಜರುಗಿಸಬೇಕು ಎಂದು ಚನ್ನೇಶ್ವರ ರೈಸ್ ಇಂಡಸ್ಟ್ರಿಲ್ ಮಾಲೀಕರು ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!