ಮಳವಳ್ಳಿ: ಕೆಜೆಪಿ ಅಸ್ತಿತ್ವಕ್ಕೆ ಬಂದ ನಂತರ ಮಳವಳ್ಳಿಗೆ ಪ್ರಥಮ ಬಾರಿಗೆ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಯಕರ್ತರ ಸಮಾವೇಶಕ್ಕೆ ಫೆ. 4ರಂದು ಆಗಮಿಸಲಿದ್ದಾರೆಂದು ಪಕ್ಷದ ಮುಖಂಡ ಮುನಿರಾಜ್ ತಿಳಿಸಿದರು.
ಕನ್ನಡಪ್ರಭದೊಂದಿಗೆ ಮಾತನಾಡಿ, ಕರ್ನಾಟಕ ಜನತಾ ಪಕ್ಷದ ಬೃಹತ್ ಸಮಾವೇಶ ಫೆ. 4 ರ ಸೋಮವಾರ ಮಧ್ಯಾಹ್ನ 12ಗಂಟೆಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ. ಸಮಾವೇಶಕ್ಕೆ ಮಾಜಿ ಸಚಿವ ಸಿ. ಎಂ. ಉದಾಸಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಕೆಜೆಪಿ ರಾಜ್ಯ ಪ್ರಾಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮಿ ನಾರಾಯಣ್, ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮುಕ್ಕುಡಪ್ಪ, ಬಿ. ಜೆ. ಪುಟ್ಟಸ್ವಾಮಿ, ಮುಮ್ತಾಜ್ ಅಲಿಖಾನ್, ಕಾ.ಪು.ಸಿದ್ದಲಿಂಗಸ್ವಾಮಿ ಭಾಗವಹಿಸಲಿದ್ದಾರೆ ಎಂದರು.