ಮಂಡ್ಯ: ಎಸ್.ಬಿ. ಎಜುಕೇಷನ್ ಟ್ರಸ್ಟ್, ಮಾಂಡವ್ಯ ಶಿಕ್ಷಣ ಮಹಾವಿದ್ಯಾನಿಲಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯನ್ನು ಮಾಂಡವ್ಯ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಡಾ. ಅರ್ಜುನಪುರಿ, ವಿವೇಕಾನಂದ ಅವರು ಚೈತನ್ಯದಾಯಕ ವ್ಯಕಿಯಾಗಿದ್ದರು. ಯುವ ಜನತೆಗೆ ಆಶಾಕಿರಣವಾಗಿದ್ದರು. ಮಾತು, ಕೃತಿಗೆ ಅರ್ಥ ತಂದು ಕೊಟ್ಟವರು ಎಂದು ಹೇಳಿದರು.
ಎಸ್‌ಬಿಇಟಿ ಕಾರ್ಯಾಧ್ಯಕ್ಷ ಡಾ.ಬಿ. ಶಿವಲಿಂಗಯ್ಯ ಮಾತನಾಡಿದರು. ವೇದಿಕೆಯಲ್ಲಿ ಜ್ಞಾನಸಾಗರ ಕ್ಯಾಂಪಸ್‌ನ ಆಡಳಿತ ಅಧಿಕಾರಿ ಕೆ.ಶಂಭುಗೌಡ, ಕಾಲೇಜಿನ ಪ್ರಾಂಶುಪಾಲರಾದ ಪುಟ್ಟಲಿಂಗಪ್ಪ ಉಪಸ್ಥಿತರಿದ್ದರು.