ಮಂಡ್ಯ

ಮಕ್ಕಳ ಗ್ರಾಮಸಭೆ

ಮೇಲುಕೋಟೆ: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಜ. 29ರ ಮಂಗಳವಾರ ಮಕ್ಕಳ ಗ್ರಾಮಸಭೆ ನಡೆಯಲಿದೆ ಎಂದು ಪಿಡಿಒ ನಾರಾಯಣಸ್ವಾಮಿ ತಿಳಿಸಿದ್ದಾರೆ.  ಇದರಲ್ಲಿ ಮೇಲುಕೋಟೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪರಿಸರ ಮತ್ತು ಶಾಲಾಗಳಲ್ಲಿ ಕಂಡುಬರುವ ಮೂಲ ಸೌಕರ್ಯಗಳ ಕೊರತೆ ಹಾಗೂ ಸಮಸ್ಯೆಯ ಬಗ್ಗೆ ಚರ್ಚಿಸಬಹುದು. ಪಂಚಾಯಿತಿ ಮಟ್ಟದಲ್ಲಿ ಪರಿಹರಿಸುವ ಸಮಸ್ಯೆಗಳಿದ್ದರೆ ತಕ್ಷಣ ಪರಿಹರಿಸಲಾಗುತ್ತದೆ. ಇಲ್ಲದಿದ್ದರೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗುರುತಿನ ಚೀಟಿ ವಿತರಣೆ
ಮಳವಳ್ಳಿ: ಮತದಾರರು ಮತದಾನದ ಗುರುತಿನ ಚೀಟಿ ಸದ್ಬಳಕೆ ಮಾಡಿಕೊಳ್ಳ ಬೇಕೆಂದು ನ್ಯಾಯಾಧೀಶ ಕುಲಕರ್ಣಿ ಹೇಳಿದರು. ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾರರ ಜವಬ್ದಾರಿ ಪ್ರಜಾಪ್ರಭುತ್ವ ದೇಶದಲ್ಲಿ ಹೆಚ್ಚಾಗಿರುತ್ತದೆ. ಈ ಜವಾಬ್ದಾರಿಯನ್ನು ಯಾವುದೇ ಆಸೆ- ಅಮಿಷಗಳಿಗೆ ಒಳಗಾಗದೆ ನಿರ್ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಕಮಲಾಕ್ಷ, ಕುಲಕರ್ಣಿ, ತಹಸೀಲ್ದಾರ್ ರಾಜೇಶ್, ಗ್ರೇಡ್-2 ತಹಸೀಲ್ದಾರ್ ಸಿದ್ದು ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ನೂತನ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಅಭಿನಂದನೆ
ಕಿಕ್ಕೇರಿ: ಪಟ್ಟಣದ ಶರತ್‌ಚಂದ್ರ ಅವರಿಗೆ ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಲುವಾಗಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕದೊಂದಿಗೆ ರಾಷ್ಟ್ರಪ್ರಶಸ್ತಿ ಲಭಿಸಿರುವುದಕ್ಕೆ ಹೋಬಳಿಯ ಕುರುಹಿನಶೆಟ್ಟಿ ಜನಾಂಗದವರು ಅಭಿನಂದಿಸಿದ್ದಾರೆ.  ಮುಖಂಡರಾದ ಕೆ.ವಿ. ಅರುಣ್‌ಕುಮಾರ್, ಕನ್ನಡ ಕಲಾ ಸಂಘದ ಕೆ.ಜೆ.ನಾರಾಯಣ್, ಕೆ.ಜಿ. ಹೇಮಣ್ಣಶೆಟ್ಟಿ, ಕೆ.ಎಚ್. ರೋಹಿತ್, ಉಮೇಶ್, ಭಜನೆಮನೆ ಅಣ್ಣಯ್ಯ, ಊಗಿನಹಳ್ಳಿ ಭೀಮಣ್ಣಶೆಟ್ಟಿ, ಕೆಇಬಿ ತಿಮ್ಮಶೆಟ್ಟಿ, ಮುರುಳಿಧರ್, ಟೈಲರ್ ವೇಣುಗೋಪಾಲ್, ಹನುಮಂತಶೆಟ್ಟಿ, ಶ್ರೀಕಂಠಶೆಟ್ಟಿ, ಪತ್ರಕರ್ತ ಕಿಕ್ಕೇರಿ ಗೋವಿಂದರಾಜು ನೇಕಾರ್, ಕೆ.ಎನ್.ನಾರಾಯಣ ಇತರರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ