ಎಚ್.ಡಿ. ಕೋಟೆ: ಮೈಸೂರು- ಮಾನಂದವಾಡಿ ರಸ್ತೆಯ ಕೋಳಗಾಲ ಸಮೀಪದ ಶನೈಶ್ಚರ ದೇವಾಲಯದ ಬಳಿ ಗುರುವಾರ ರಾತ್ರಿ ಒಂದೂವರೆ ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ. ಈ ಚಿರತೆಯು ರಸ್ತೆ ಪಕ್ಕದಲ್ಲಿ ಸತ್ತು ಬಿದ್ದಿರುವುದನ್ನು ಗಮನಿಸಿದ ಪಾದಚಾರಿಯು ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದರು.
ಸ್ಥಳಕ್ಕೆ ಎಚ್.ಡಿ. ಕೋಟೆ ವಲಯದ ಅರಣ್ಯಾಧಿಕಾರಿ ಮೋಹನ್‌ಕುಮಾರ್ ಭೇಟಿ ನೀಡಿದ್ದರು. ಚಿರತೆಯ ಮರಣೋತ್ತರ ಪರೀಕ್ಷೆ ವೈದ್ಯರಾದ ವೆಂಕಟರಾಮ್ ಶುಕ್ರವಾರ ನಡೆಸಿದ್ದು, ಚಿರತೆಯು ಬ್ರಾಕೋ ನ್ಯುಮೋನಿಯಾದಿಂದ ಬಳಲಿದ್ದು ಹಾಗೂ ಕಳೆದ 3-4 ದಿನಗಳಿಂದ ಆಹಾರ ಬಿಟ್ಟಿರಬಹುದೆಂದು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.