ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.29
ಅಭಿಯಂತರರು ರಂಗತಂಡವು 20ರ ಹರೆಯದ ಸಂಭ್ರಮದಲ್ಲಿ ಏರ್ಪಡಿಸಿರುವ ರಂಗಭೂಮಿಯತ್ತ ಎಂಬ ರಂಗ ತರಬೇತಿ ಶಿಬಿರ ಸಮಾರೋಪ ಹಾಗೂ ಅಭಿಯಂತರರ ರಂಗೋತ್ಸವವು ಏ.1 ಮತ್ತು 2 ರಂದು ರಂಗಾಯಣದ ವನರಂಗದಲ್ಲಿ ನಡೆಯಲಿದೆ. ಏ.1ರ ಸಂಜೆ 6ಕ್ಕೆ ನಡೆಯುವ ಸಮಾರೋಪದಲ್ಲಿ ಮೈಸೂರು ಹಿಂದಿನ ಜಿಲ್ಲಾಧಿಕಾರಿ ಡಾ.ರಾಮೇಗೌಡ, ರಂಗಾಯಣದ ಮಾಜಿ ನಿರ್ದೇಶಕ ಡಾ.ಬಿ.ವಿ. ರಾಜಾರಾಮ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಅತಿಥಿಗಳಾಗುವರು ಎಂದು ಅಭಿಯಂತರರು ರಂಗತಂಡದ ಅಧ್ಯಕ್ಷ ಎಚ್.ಎಸ್. ಸುರೇಶ್‌ಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆ ದಿನ ಸಂಜೆ 7ಕ್ಕೆ ಕೆ.ವಿ. ಸುಬ್ಬಣ್ಣ ಅವರ ಸೂಳೆ- ಸನ್ಯಾಸಿ ಎಂಬ ಕನ್ನಡ ನಾಟಕವು ಮಂಜುನಾಥ್ ಎಲ್. ಬಡಿಗೇರ ಅವರ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ಪ್ರಸ್ತುತಪಡಿಸುವರು ಎಂದರು. ಏ.2ರ ಸಂಜೆ 6ಕ್ಕೆ ಶಿಬಿರಾರ್ಥಿಗಳಿಂದ ಜಾನಪದ ನೃತ್ಯ, ಸಂಜೆ 7ಕ್ಕೆ ಮಂಜುಳ ಪದ್ಮನಾಭನ್ ಅವರ ಲೈಟ್ಸ್ ಔಟ್ ನಾಟಕವು ತಮ್ಮ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ಅಭಿನಯಿಸುವರು ಎಂದರು.