ಕ.ಪ್ರ. ವಾರ್ತೆ ್ಣ ಮೈಸೂರು ್ಣ ಮಾ. 29
ತಾಲೂಕಿನ ವರಕೋಡು ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ತಪ್ಪಿಸುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಸಮೀಪದ ಬೆಟ್ಟದಲ್ಲಿ ಚಿರತೆಗಳು ಬೀಡುಬಿಟ್ಟಿದ್ದು, ಮೇಯಲು ಹೋಗುವ ದನಕರುಗಳು, ಕುರಿಗಳ ಮೇಲೆ ದಾಳಿ ಮಾಡಿ, ಗಾಯಗೊಳಿಸುತ್ತಿದ್ದು, ಗ್ರಾಮಸ್ಥರ ಕಬ್ಬಿನ ಗದ್ದೆ ಹಾಗೂ ತೋಟಗಳಲ್ಲಿ ಆಗಾಗ್ಯೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ರೈತರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಹೊಲಗದ್ದೆಗಳಿಗೆ ಹೋಗಲು ಭಯಭೀತರಾಗಿದ್ದಾರೆ. ಬೆಟ್ಟದ ಪಕ್ಕದಲ್ಲಿಯೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಆತಂಕ ಪಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವಂತೆ ವಾಜಮಂಗಲ ಗ್ರಾಪಂ ಸದಸ್ಯ ದೊಡ್ಡೇಗೌಡ ಕೋರಿದ್ದಾರೆ.