ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತ ಜನರು ಸ್ಥಿರ ಹಾಗೂ ಸ್ವಚ್ಛ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಜನರ ನಿರೀಕ್ಷೆಯಂತೆ ಒಳ್ಳೆಯ ಆಡಳಿತ ನೀಡಬೇಕು. ಒಂದು ವೇಳೆ ಭಿನ್ನಮತ ಮತ್ತಿತರ ಕಾರಣಗಳಿಂದ ಅಭಿವೃದ್ಧಿ ಕುಂಠಿತ ಮಾಡಿದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಪಾಠ ಕಲಿಸಲಿದ್ದಾರೆ. ಆದ್ದರಿಂದ ಕಾಂಗ್ರೆಸ್ ಕೊಟ್ಟಿರುವ ಅವಕಾಶದಲ್ಲಿ ಎಚ್ಚರಿಕೆಯಿಂದ ಉತ್ತಮ ಆಡಳಿತ ನಡೆಸಬೇಕು.
ಟಿ ಕುರುಬೂರು ಶಾಂತಕುಮಾರ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಸಂಘ
ಜನಸಾಮಾನ್ಯರು ಭ್ರಷ್ಟಾಚಾರ ಮತ್ತು ದುರಾಡಳಿತ ತೊಡೆದು ಹಾಕುವ ಸಲುವಾಗಿ ಕಾಂಗ್ರೆಸ್ಗೆ ಅಧಿಕಾರ ಕೊಟ್ಟಿದ್ದಾರೆ. ಅಂದ ಮಾತ್ರಕ್ಕೆ ಗೆದ್ದ ಪಕ್ಷದವರು ಒಳ್ಳೆಯವರೆಂದು ಭಾವಿಸುವಂತಿಲ್ಲ. ಆದರೂ ಅವರು ಸಹ ಬಿಜೆಪಿಯಂತೆ ದುರಾಡಳಿತ ನಡೆಸಿದರೆ ಮುಂದೆ ಅವರಿಗೂ ಇದೇ ಗತಿ ಬರುತ್ತದೆ ಎಂದು ಜನರು ಸಂದೇಶ ಸಾರಿದ್ದಾರೆ.
ಟಿ ಡಾ. ಬಾಲಸುಬ್ರಹ್ಮಣ್ಯಂ, ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಯೂತ್ ಮೂವೆಮಂಟ್
ಭ್ರಷ್ಟಾಚಾರಕ್ಕೆ ಕರ್ನಾಟಕದಲ್ಲಿ ನೆಲೆಯಿಲ್ಲ ಎಂಬುದನ್ನು ಜನರು ತೋರಿಸಿದ್ದಾರೆ. ದುರಾಡಳಿತವನ್ನು ಜನರು ಸಹಿಸೋಲ್ಲ ಎಂಬುದಕ್ಕೆ ಇದು ನಿರ್ದಶನ. ಅಪರೇಷನ್ ಕಮಲ, ರೆಸಾರ್ಟ್ ರಾಜಕಾರಣ ಇವೆಲ್ಲದಕ್ಕೂ ಕೊನೆ ಹಾಡಿದ್ದಾರೆ. ಒಂದೇ ಪಕ್ಷದಿಂದ ರಾಜ್ಯದ ಅಭಿವೃದ್ಧಿ ಸಾಧ್ಯ. ಕರ್ನಾಟಕದಲ್ಲಿ ಬಹುಮತ ಸರ್ಕಾರ ಸಂತಸ ತಂದಿದೆ.
ಟಿ ಡಾ. ಎಚ್.ಎಂ. ನಾಗರಾಜು,ಅಧ್ಯಕ್ಷರು, ಹಿರಿಯ ನಾಗರಿಕರ ಮಂಡಳಿ
್ಙರಾಜ್ಯದ ಜನರು ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದಿದ್ದಾರೆ. ಮತದಾರರು ತಮ್ಮ ನೆಚ್ಚಿನ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ, ಆಂತರಿಕ ಕಚ್ಚಾಟ ಹಾಗೂ ಹೊಂದಾಣಿಕೆಯ ಕೊರತೆ ಅದರ ಈ ಅವನತಿಗೆ ಕಾರಣ. ಜನಹಿತಕ್ಕಾಗಿ ಯಾವುದೇ ಪಕ್ಷಗಳು ಅಧಿಕಾರ ನಡೆಸುವುದು ಅವಶ್ಯಕ.
ಟಿ ಡಾ.ಎಚ್.ಬಿ. ರಾಜಶೇಖರ್,
ಅಧ್ಯಕ್ಷರು, ಕಲ್ಪವೃಕ್ಷ ಟ್ರಸ್ಟ್
ಜನತೆಯ ಉದ್ಧಾರಕ್ಕಿಂತ ತಮ್ಮ ತಮ್ಮ ಉದ್ಧಾರ ಹಾಗೂ ಅಧಿಕಾರ ಮುಖ್ಯವೆಂದು ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಮೇಲೆ ಬೆಸತ್ತ ಜನರು ಜಾಗೃತರಾಗಿ ಸರಿಯಾದ ಉತ್ತರ ನೀಡಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರಗಳು ಎಲ್ಲಾ ವರ್ಗಗಳ ಹಿತ ಬಯಸಬೇಕು. ಇಲ್ಲದೆ ಹೋದರೆ ಇಂತಹ ಬದಲಾವಣೆ ಕಾಣಬೇಕಾಗುತ್ತದೆ ಎಂಬುದಕ್ಕೆ ಎಲ್ಲಾ ಪಕ್ಷಗಳಿಗೂ ಇದು ಎಚ್ಚರಿಕೆಯ ಗಂಟೆ.
ಟಿ ಡಾ. ಅನುಸೂಯ ಕೆಂಪನಹಳ್ಳಿ,
ಸಾಹಿತಿ