ಮೈಸೂರು: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದಿರುವವರು ತಮ್ಮ ಆಧಾರ್ ಕಾರ್ಡಿನ ಒಂದು ಪ್ರತಿಯನ್ನು ಶೀಘ್ರದಲ್ಲಿ ಖಾತೆಯಿರುವ ಅಂಚೆ ಕಚೇರಿಗೆ ಒದಗಿಸಬೇಕು ಎಂದು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಹೇಳಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಇದು ಖಾತೆಯಲ್ಲಿ ಮುಂದಿನ ವಹಿವಾಟಿಗೆ, ಕೂಲಿ, ಪಿಂಚಣಿ ಹಣ ಪಡೆಯಲು ಅಗತ್ಯ ಎಂದು ತಿಳಿಸಿದ್ದಾರೆ.