ಮೈಸೂರು

ಕಠಿಣ ಪರಿಶ್ರಮದ ಅಧ್ಯಯನ ಅಗತ್ಯ: ಲಕ್ಷ್ಮಣ್

ಕ.ಪ್ರ.ವಾರ್ತೆ ,  ಮೈಸೂರು ,  ಮೇ 14
ವಿದ್ಯಾರ್ಥಿಗಳಿಗೆ ಮಾನಸಿಕ ಸಾಮರ್ಥ್ಯದ ಜೊತೆಗೆ ಕಠಿಣ ಪರಿಶ್ರಮದ ಅಧ್ಯಯನ ಅಗತ್ಯ ಎಂದು ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಏರ್ಪಡಿಸಿದ್ದ ಐಎಎಸ್ ಮತ್ತು ಕೆಎಎಸ್ ಅಭ್ಯರ್ಥಿಗಳ ತರಬೇತಿ ಶಿಬಿರದ ಶುಭ ಹಾರೈಕೆ ಸಮಾರಂಭದಲ್ಲಿ ಮಾತನಾಡಿ, ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಗಳಾಗಬೇಕು ಎಂಬ ಅಚಲ ವಿಶ್ವಾಸದಿಂದ ಓದಿದರೆ ಮಾತ್ರ ಯಾವುದೇ ಜ್ಞಾನ ಉಪಯೋಗವಾಗಲು ಸಾಧ್ಯ. ಅದಕ್ಕಾಗಿ ನಾವು ಇತಿಹಾಸವನ್ನು ಒಮ್ಮೆ ಪುನರ್ ಅವಲೋಕಿಸಬೇಕು ಎಂದರು.
ಅಧಿಕಾರಿಗಳಾದರೆ ಸಾಲುವುದಿಲ್ಲ. ಅಧಿಕಾರಿ ಮನಸ್ಥಿತಿಗಿರುವ ಧರ್ಮ ಪಾಲಿಸಬೇಕು. ಸಮಾಜಕ್ಕೆ ಕಲ್ಯಾಣ ಕಾರ್ಯಕ್ರಮ ರೂಪಿಸುವ ಮಹತ್ತರ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳು ಮತ್ತು ನೌಕರರಿಗೆ ಇರುವ ರಕ್ಷಣಾತ್ಮಕ ಬೇಲಿ, ಇನ್ಯಾರಿಗೂ ಇಲ್ಲ. ಅಂತಹ ರಕ್ಷಣಾತ್ಮಕ ನೆರವನ್ನು ಸಮಾಜದಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು. ಮುಕ್ತ ಭಂಡಾರ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಎಂಡಿಎ ಆಯುಕ್ತ ಡಾ. ಸಿ.ಜಿ. ಬೆಟಸೂರಮಠ, ಇದು ಅವಕಾಶಗಳ ಯುಗ. ಯಾರು ಇದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೋ, ಅವರು ಮುಂದಿರುತ್ತಾರೆ. ಬದಲಾದ ವೈಜ್ಞಾನಿಕ ಸಂದರ್ಭಕ್ಕೆ ವೇಗವಾಗಿ ಅರ್ಥೈಸಿಕೊಳ್ಳುವುದನ್ನು ಕಲಿಯಬೇಕು.  ಸ್ವತಃ ಅಭ್ಯಾಸ ಮತ್ತು ಅಧ್ಯಯನ ಮುಖ್ಯ ಎಂದರು.
ಮುಕ್ತ ವಿ.ವಿ. ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಅರಸುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಉಚಿತವಾಗಿ ತರಬೇತಿ ನೀಡಲು ಹಾಗೂ ಅವರ ಭವಿಷ್ಯದಲ್ಲಿ ಪಾಲುದಾರರಾಗಲು ವಿವಿ ಹೆಮ್ಮೆ ಪಡುತ್ತದೆ ಎಂದರು. ತರಬೇತಿ ವಿಭಾಗದ ಸಂಯೋಜನ ಅಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!