ಮೈಸೂರು

ದೂರದರ್ಶಕ ತಯಾರಿಕೆ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಮೈಸೂರು ಮೇ 19
ಇಲ್ಲಿನ ಮಾನಂದವಾಡಿ ರಸ್ತೆಯಲ್ಲಿರುವ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ಮೈಸೂರ್ ಸೈನ್ಸ್ ಫೌಂಡೇಷನ್ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಜೂ. 8 ಮತ್ತು 9 ರಂದು ಎರಡು ದಿನಗಳ ದೂರದರ್ಶಕ ತಯಾರಿಕೆ ಕಾರ್ಯಾಗಾರ ಹಮ್ಮಿಕೊಂಡಿದೆ. ಕಾರ್ಯಾಗಾರದಲ್ಲಿ ತಜ್ಞರಾದ ಡಾ. ಶಿವಲಿಂಗಸ್ವಾಮಿ, ಡಾ.ಕೆ.ಎ. ಕಾಗ್ಲಿ, ಡಾ.ಎಂ.ವೈ. ಆನಂದ್ ಅವರಿಂದ ದೂರದರ್ಶಕ ಬೆಳೆದಬಂದ ಹಾದಿ, ನಮ್ಮ ಸೌರಮಂಡಲ ಮತ್ತು ನಕ್ಷತ್ರಪುಂಜಗಳು ಬಗ್ಗೆ ಉಪನ್ಯಾಸ, ಆಕಾಶ ವೀಕ್ಷಣೆಗೆ ಸಹಕಾರಿಯಾಗುವ ಸ್ಟೆಲ್ಲಾರಿಯಮ್ ತಂತ್ರಾಂಶದ ಪರಿಚಯ, ಬೆಳಗಿನ ಹೊತ್ತು ಸೂರ್ಯನೊಂದಿಗೆ ನಡೆಸುವ ಹಲವು ಪ್ರಯೋಗಗಳು, ದೂರದರ್ಶನದ ತಯಾರಿ ಮತ್ತು ವೀಕ್ಷಣೆ ಮತ್ತು ತಜ್ಞರೊಂದಿಗೆ ಸಂವಾದ ಏರ್ಪಡಿಸಿದೆ. 12 ವರ್ಷ ಮೇಲ್ಪಟ್ಟ ಆಸಕ್ತ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಹೆಸರು ನೋಂದಾಯಿಸಲು ಮೊ. 9844405284 ಸಂಪರ್ಕಿಸುವಂತೆ ಫೌಂಡೇಷನ್‌ನ ಕಾರ್ಯದರ್ಶಿ ಜಿ.ಬಿ. ಸಂತೋಷ್ ಕುಮಾರ್ ಕೋರಿದ್ದಾರೆ.

ಪ್ರೇಕ್ಷಕರೊಂದಿಗೆ ಮದರಂಗಿ ವೀಕ್ಷಣೆ
ಕನ್ನಡಪ್ರಭ ವಾರ್ತೆ ಮೈಸೂರು ಮೇ 19
ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮದರಂಗಿ ಚಿತ್ರದ ನಾಯಕ ಕೃಷ್ಣ ಅವರು ಶನಿವಾರ ನಗರದ ಲೀಡೋ ಚಿತ್ರಮಂದಿದಲ್ಲಿ ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಹುಡುಗರು, ಜಾಕಿ ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸುವುದರ ಜತೆಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೆ. ಬಳಿಕ ಸುವರ್ಣ ವಾಹಿನಿಯ ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನಟಿಸಿದ್ದು ನನಗೆ ಹೆಸರು ತಂದುಕೊಟ್ಟಿತು. ಇದೀಗ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿದ್ದೇನೆ. ರಾಜ್ಯದ ಜನರು ಬೆನ್ನು ತಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿತೆರೆಯಲ್ಲಿ ನಟಿಸಲು ಮಾನಸಿಕವಾಗಿ ಸಿದ್ಧತೆ ನಡೆಸಿದ್ದೆ. ಅದು ಈಗ ಫಲಪ್ರದವಾಗಿದ. ಮುಂದೆ ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮದರಂಗಿ ಚಿತ್ರಕ್ಕೆ 2 ಕೋಟಿ ವೆಚ್ಚ ತಲಗುಲಿದ್ದು, ಅದರಲ್ಲೂ ಡಾರ್ಲಿಂಗ್ ಡಾರ್ಲಿಂಗ್ ಎಂಬ ಹಾಡು ಸಖತ್ ಫೇಮಸ್ ಆಗಿದೆ. ಈ ಚಿತ್ರದಲ್ಲಿ ಸ್ನೇಹ, ಪ್ರೀತಿ, ರೌಡಿಸಂ ಎಲ್ಲವೂ ಇದೆ. ಕಥೆ ಇಲ್ಲದಿದ್ದರೂ ಚಿತ್ರ ಬೋರ್ ಹೊಡೆಸುವುದಿಲ್ಲ ಎಂದರು.

ಸ್ಪರ್ಧೆಗೆ ದಲಿತ ಸಾಹಿತ್ಯ ಕೃತಿ ಆಹ್ವಾನ
ಕನ್ನಡಪ್ರಭ ವಾರ್ತೆ ಮೈಸೂರು ಮೇ 19
ದಲಿತ ಸಾಹಿತ್ಯ ಕೃತಿ ಸ್ಪರ್ಧೆಗಾಗಿ 2012ನೇ ಸಾಲಿನಲ್ಲಿ ಯಾವುದೆ ಪ್ರಕಾರದ ಪ್ರಕಟವಾದ ಉತ್ತಮ ದಲಿತ ಸಾಹಿತ್ಯದ ಕೃತಿಯನ್ನು ಆಹ್ವಾನಿಸಿದೆ. ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಎಲ್. ಬಸವರಾಜು ಅವರು ಒಂದು ಲಕ್ಷ ರು. ಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಮೃತ ಮಹೋತ್ಸವ ಸವಿ ನೆನಪು ದತ್ತಿಯನ್ನು ಸ್ಥಾಪಿಸಿದ್ದಾರೆ. ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸಲು ಕೊನೆಯ ದಿನಾಂಕ ಜೂ. 30. ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ದೂ. 080-26623584 ಸಂಪರ್ಕಿಸಬಹುದು.
ಸುನಿಲ್‌ಕುಮಾರ್‌ಗೆ ಡಾಕ್ಟರೇಟ್
ಕನ್ನಡಪ್ರಭ ವಾರ್ತೆ ಮೈಸೂರು ಮೇ 19
ಡಾ. ರಾಜ್‌ಕುಮಾರ್ ಎಚ್. ಗರಂಪಲ್ಲಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಸಿ.ಪಿ. ಸುನಿಲ್‌ಕುಮಾರ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಸಸ್ಯಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.

ಸುವರ್ಣ ಮಹೋತ್ಸವ ಸಂಪನ್ನ
ಕನ್ನಡಪ್ರಭ ವಾರ್ತೆ ಮೈಸೂರು ಮೇ 19
ಕಳೆದ ಐದು ದಿನಗಳಿಂದ ಆಯೋಜಿಸಿದ್ದ ಅಮರ ಕನಕ ಸುವರ್ಣ ಮಹೋತ್ಸವ ವಾರ್ಷಿಕೋತ್ಸವ ಸಮಾರೋಪ ಕಲಾಮಂದಿರದಲ್ಲಿ ನಡೆಯಿತು.  ಅಮರ ಕಲಾಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ದೇವಾನಂದ ತಂಡದವರು ರಂಗಗೀತೆಳನ್ನು ಹಾಡಿದರು.ಶರಣು ಶರಣಯ್ಯ ಎಂಬ ಬೀದಿ ನಾಟಕದ ಆಶಯ ಗೀತೆಯೊಂದಿಗೆ ಆರಂಭವಾದ ಗೀತಾ ಗಾಯನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಲಗಾರ ಹಾಗೂ ಕಿಂದರಿಜೋಗಿ, ಬಿ.ವಿ. ಕಾರಂತರ ಸತ್ತವರ ನೆರಳು, ಲಿಂಗದೇವರು ಹಳೆಮನೆ ಅವರ ಧರ್ಮಪುರಿ ದೇವದಾಸಿ ಈ ಮುಂತಾದ ನಾಟಕಗಳ ಗೀತೆಗಳನ್ನು ಹಾಡಿ ಸಭಿಕರ ಮುದಗೊಳಿಸಿದರು. ನಂತರ ಕದಂಬ ರಂಗವೇದಿಕೆಯು ಡಾ. ಲತಾ ರಾಜಶೇಖರ್ ಅವರ ಅಹಿಂಸೋ ಪರಮೋ ಧರ್ಮ- ನಾಟಕವನ್ನು ಎಚ್.ಎಸ್. ಕವಿತಾ ನಿರ್ದೇಶನದಲ್ಲಿ ಅಭಿನಯಿಸಿದರು. ಇದಾದ ನಂತರ ಸುಂದರಶ್ರೀ ಅನುವಾದಿಸಿರುವ ಮ್ಯಾಂಗೋಹೌಸ್ ತಂಡದವರು ಗಣೇಶ್ ಯಾದವ್ ನಿರ್ದೇಶನದಲ್ಲಿ ಎಲ್ಲಿ ಜಾರಿತೊ ಮನವು ಎಂಬ ನಾಟಕ ಪ್ರದರ್ಶಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!