ಮೈಸೂರು: ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯು ಕೊಡಗು ಜಿಲ್ಲೆ ಗೋಣಿಕೊಪ್ಪದ ವಿವೇಕಾನಂದ ಆರೋಗ್ಯ ಕೇಂದ್ರದಲ್ಲಿ ಆ.6ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದೆ. ಸ್ತನದಲ್ಲಿ ಊತ, ಗಂಟು ಅಥವಾ ಶರೀರದ ಯಾವುದೇ ಭಾಗದಲ್ಲಿ ಗಡಸುತನ, ಶರೀರದ ಯಾವುದೇ ಭಾಗದಿಂದ ರಕ್ತಸ್ರಾವ, ಮಲಮೂತ್ರ, ತೊಂಟೆ, ವಾಂತಿ ಹಾಗೂ ಒಂದು ತಿಂಗಳ ಮೇಲ್ಪಟ್ಟು ಬಾಯಿ, ಚರ್ಮ ಅಥವಾ ಶರೀರದ ಯಾವುದೇ ಭಾಗದಲ್ಲಿ ಗಾಯ ವಾಸಿಯಾಗದಿದ್ದವರು ತಪಾಸಣೆಯಲ್ಲಿ ಭಾಗವಹಿಸಬಹುದು. ಮೊ. 70265 42580 ಸಂಪರ್ಕಿಸಬಹುದು.