ಮೈಸೂರು

ಮೇವಿನ ಕಿರುಪೊಟ್ಟಣ ವಿತರಣೆ

ಮೈಸೂರು: ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಮೇವಿನ ಬೀಜದ ಕಿರುಪೊಟ್ಟಣಗಳನ್ನು ಜಿಲ್ಲೆಯ 7 ತಾಲೂಕುಗಳಿಗೆ ಹೆಚ್ಚುವರಿಯಾಗಿ ಸರಬರಾಜು ಮಾಡಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ದೇವದಾಸ್ ಹೇಳಿದ್ದಾರೆ. ಪುಸ್ತುತ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಮೇವು ಬೆಳೆ ಬೆಳೆಯಲು ಪೂರಕ ವಾತಾವರಣವಿದೆ. ಆಸಕ್ತ ರೈತರು ಸಮೀಪದ ಪಶುವೈದ್ಯ ಸಂಸ್ಥೆ ಸಂಪರ್ಕಿಸಿ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಪಡೆದು ಮೇವು ಬೆಳೆ ಬೆಳೆಸಲು ಕ್ರಮ ವಹಿಸುವಂತೆ ತಿಳಿಸಿದ್ದಾರೆ.




ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ನಡುವೆ ನೂಕಾಟ
ಪೊಲೀಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕಾಟ ನಡೆದ ಘಟನೆ ಮಂಗಳವಾರ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜರುಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ದಿನಗಳ ಭೇಟಿಗಾಗಿ ಮಂಗಳವಾರ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದರು. ಅವರನ್ನು ಸ್ವಾಗತಿಸಲು ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು. ಸಿದ್ದರಾಮಯ್ಯ ಅವರು ಪೊಲೀಸರಿಂದ ಗೌರವರಕ್ಷೆ ಸ್ವೀಕರಿಸಿ ಮಾಧ್ಯಮದವರ ಜೊತೆ ಮಾತನಾಡಲು ಬಂದಾಗ ಕಾರ್ಯಕರ್ತರು ಅತ್ತ ನುಗ್ಗಿದರು. ಪೊಲೀಸರು ಅವರನ್ನು ತಡೆದಾಗ, ಸಿಟ್ಟಿಗೆದ್ದ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಅಲ್ಲದೇ ಡೌನ್ ಡೌನ್ ಪೊಲೀಸ್ ಎಂದು ಧಿಕ್ಕಾರ ಕೂಗಿದರು. ಪಕ್ಷದ ಮುಖಂಡರು ಸಮಾಧಾನಪಡಿಸಲು ವಿಫಲರಾದಾಗ ಸ್ವತಃ ಸಿದ್ದರಾಮಯ್ಯ ಅವರೇ ಕಾರ್ಯಕರ್ತರ ಬಳಿ ತೆರಳಿ, ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಡಾ.ನಂಜೇಶ್ ಕೊಪ್ಪಗೆ ಪ್ರಶಸ್ತಿ
ಮೈಸೂರು: ನೇಚರ್ ಕ್ಯೂರ್ ಸಂಸ್ಥೆಯ ಡಾ.ನಂಜೇಶ್ ಕೊಪ್ಪ ಅವರಿಗೆ ಇಂಟರ್ನ್ಯಾಷನಲ್ ಹ್ಯುಮೇನಿಟೇರಿಯನ್ ಅವಾರ್ಡ್ ಸಂದಿದೆ. ಇತ್ತೀಚೆಗೆ ಇಂಡಿಯನ್ ಬೋರ್ಡ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ಸ್ಯಿಂದ ಕೋಲ್ಕತಾದಲ್ಲಿ ನಡೆದ 23ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ನಂಜೇಶ್ ಅವರು ಪರ್ಯಾಯ ಔಷಧಗಳ ಪ್ರಯೋಗದಲ್ಲಿನ ನೀಡಿದ ಅಮೂಲ್ಯ ಕೊಡುಗೆ ಮತ್ತು ಅಪೂರ್ವ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸಮ್ಮೇಳನದಲ್ಲಿ ನಂಜೇಶ್ ಅವರು ಪರ್ಯಾಯ ಔಷಧಗಳ ಬಳಕೆ ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ವೈಜ್ಞಾನಿಕವಾದ ತಮ್ಮ ಉಪನ್ಯಾಸ ಮಂಡಿಸಿದರು.
ಮಹಿಳೆ ವಿರುದ್ಧ ದೂರು
ಮೈಸೂರು: ಚಿಕಿತ್ಸೆಗೆ ಪಾವತಿಸಿದ್ದ ಹಣವನ್ನು ಹಿಂಪಡೆಯಲು ಮಹಿಳೆಯೊಬ್ಬರು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗರ್ಭಧಾರಣ ತಜ್ಞ ಡಾ.ಶರತ್ಕುಮಾರ್ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಿಳುನಾಡಿನ ಈರೋಡ್ ನಿವಾಸಿ ಸಂಪತಕುಮಾರ್ ಅವರ ಪತ್ನಿ ನಾಗಲಕ್ಷ್ಮೀ ಎಂಬವರು ಕಳೆದ ಎರಡು ವರ್ಷದಿಂದ ತಮ್ಮ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ತಮ್ಮ ವಯಸ್ಸನ್ನು ಮರೆಮಾಚಿ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂಬ ಕಾರಣಕ್ಕೆ ಈ ರೀತಿ ವರ್ತಿಸುತ್ತಿದ್ದಾರೆ. ಇದರಿಂದ ತಮ್ಮ ಸಂಸ್ಥೆಗೆ ಕಪ್ಪುಚುಕ್ಕೆ ತರುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೆಡಿವೇವ್ ಗರ್ಭಧಾರಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ನಾಗಲಕ್ಷ್ಮಿ ಅವರ ಕುಟುಂಬದ ಸದಸ್ಯರು ಮೆಡಿವೇವ್ ಆಸ್ಪತ್ರೆ ಎದುರು ಆ.6  ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT