ಮೈಸೂರು

ಇಲ್ಲಿ ಪೌರಕಾರ್ಮಿಕರದ್ದೆ ಸಮಸ್ಯೆ

ಮಾ. ವೆಂಕಟೇಶ್
ಮೈಸೂರು: ವಿಜಯನಗರ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚಿನ ವಿಸ್ತಾರ ಹಾಗೂ ಬೃಹತ್ ಜನಸಂಖ್ಯೆಯನ್ನು ಹೊಂದಿರುವ ವಾರ್ಡ್. ಸುಮಾರು 6, 500 ಮನೆಗಳು, 25 ಸಾವಿರ ಮತದಾರರು ಹಾಗೂ 50 ಸಾವಿರ ಜನಸಂಖ್ಯೆಯನ್ನು ಹೊಂದಿದೆ ಎಂಬುದು ವಿಶೇಷ.
ಅಲ್ಲದೆ ಚಾಮರಾಜ, ಕೃಷ್ಣರಾಜ ಹಾಗೂ ಚಾಮುಂಡೇಶ್ವರಿ- ಈ ಮೂರು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಗೆ ಈ ವಾರ್ಡ್ ಹರಡಿ ಕೊಂಡರುವುದು ವಿಶೇಷ. ಆದರೆ ಇಷ್ಟು ವಿಶಾಲವಾದ ಪ್ರದೇಶದ ಸ್ವಚ್ಛತೆಗೆ ನಗರ ಪಾಲಿಕೆಯು ಕಲ್ಪಿಸಿರುವುದು ಕೇವಲ 25 ಮಂದಿ ಪೌರಕಾರ್ಮಿಕರು ಮಾತ್ರ. 24 ನೇ ವಾರ್ಡ್ ವ್ಯಾಪ್ತಿಯು ಉತ್ತರಕ್ಕೆ ಯೋಗನರಸಿಂಹಸ್ವಾವು ದೇವಸ್ಥಾನದ ರಸ್ತೆ ಹಾಗೂ ಕಾರ್ಪೋರೇಷನ್ ಬ್ಯಾಂಕ್ ರಸ್ತೆ ಕೂಡುವ ಬಿಂದುವಿನಿಂದ ಸಾಹಿತ್ಯ ಭವನ ರಸ್ತೆ ಸೇರುವ ಬಿಂದುವರೆಗೆ.  ಪೂರ್ವಕ್ಕೆ ಕಾರ್ಪೋರೇಷನ್ ಬ್ಯಾಂಕ್ ರಸ್ತೆ ಹಾಗೂ ಸಾಹಿತ್ಯ ಭವನ ರಸ್ತೆ ಸೇರುವ ಬಿಂದುವಿನಿಂದ ಮೈಸೂರು ಹುಣಸೂರು ರಸ್ತೆಯವರೆಗೆ. ಅಲ್ಲಿಂದ ಚದುರಂಗ ರಸ್ತೆಯಲ್ಲಿ ಜೆಸಿಇ ಕಾಲೇಜು ಮೂಲಕ ಸಾಹುಕಾರ್ ಚನ್ನಯ್ಯ ರಸ್ತೆ ಸೇರುವ ಬಿಂದುವರೆಗೆ. ಅಲ್ಲಿಂದ ಸಾಹುಕಾರ್ ಚೆನ್ನಯ್ಯ ರಸ್ತೆಯ ಟಿ.ಕೆ. ಬಡಾವಣೆಯ ಅರಳಿ ಕಟ್ಟೆಯವರೆಗೆ ಅಲ್ಲಿಂದ ರಾಮಮಂದಿರ ರಸ್ತೆಯ ಮೂಲಕ ಟಿ.ಕೆ. ಬಡಾವಣೆಯ 9ನೇ ಕ್ರಾಸ್ ಬಿಂದುವರೆಗೆ. ದಕ್ಷಿಣಕ್ಕೆ ಟಿ.ಕೆ. ಬಡಾವಣೆಯ 9ನೇ ಕ್ರಾಸ್ ಮತ್ತು ರಾಮಮಂದಿರ ರಸ್ತೆ ಸೇರುವ ಬಿಂದುವಿನಿಂದ 9ನೇ ಅಡ್‌ಡರಸ್ತೆಯ ಟಿ.ಕೆ. ಬಡಾವಣೆಯ ರಸ್ತೆಯಲ್ಲಿರುವ ಗಣೇಶ್ ಭಂಡಾರ್ ರಸ್ತೆಯ ಮೂಲಕ ಹೈಟೆನ್ಷೆನ್ ರಸ್ತೆ ಬಿಂದುವರೆಗೆ. ಪಶ್ಚಿಮಕ್ಕೆ ಟಿ.ಕೆ ಬಡಾವಣೆಯ 9ನೇ ಅಡ್‌ಡರಸ್ತೆಯ ಗಣೇಶ್ ಭಂಡಾರ್ ಮೂಲಕ ಹೈಟೆನ್ಷೆನ್ ಸೇರುವ ಬಿಂದುವಿನಿಂದ ಬೋಗಾದಿ ರಸ್ತೆಯವರೆಗೆ. ಅಲ್ಲಿಂದ ನಗರ ಪಾಲಿಕೆ ಸರಹದ್ದಿನ ಮೂಲಕ ಎಸ್‌ಜೆಸಿಇ ಕಾಲೇಜು ಹಿಂಭಾಗದ ಕಾಂಪೌಂಡ್ ಮೂಲಕ ಹುಣಸೂರು ಮೈಸೂರು ರಸ್ತೆ ಸೇರವ ಬಿಂದುವರೆಗೆ. ಯೋಗನರಸಿಂಹ ಸ್ವಾಮಿ ದೇವಸ್ಥಾನದ ರಸ್ತೆಯ ಮೂಲಕ ಕಾರ್ಪೋರೇಷನ್ ಬ್ಯಾಂಕ್ ರಸ್ತೆಯವರೆಗೆ ಒಳಗೊಂಡಿದೆ.
ಇಲ್ಲಿನ ಜನತಾನಗರದಲ್ಲಿ ಇರುವ ಕಿವುಡು ಮತ್ತು ಮೂಗರ ಶಾಲೆಯ ಎದುರಿನಲ್ಲಿ ಇರುವ ಜಾಗದಲ್ಲಿ ಕಸದ ತೊಟ್ಟಿಯನ್ನು ಇರಿಸಲಾಗಿದೆ. ಮನೆ ಮನೆಯಿಂದ ಆಟೋ ಟಿಪ್ಪರ್ ಅಥವಾ ಕೈಗಾಡಿ ಮೂಲಕ ಸಂಗ್ರಹಿಸುವ ಕಸವನ್ನು ಅಲ್ಲಿಗೆ ತಂದು ಹಾಕಲಾಗುತ್ತದೆ. ಅಲ್ಲಿಂದ ಲಾರಿ ಮೂಲಕ ಮುಖ್ಯ ಘಟಕಕ್ಕೆ ರವಾನಿಸಲಾಗುವುದು. ಇತರೆಡೆ ತೊಟ್ಟಿಯ ಬದಲಿಗೆ ಕಸ ಹಾಕುವ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಅಲ್ಲಿಗೆ ತಂದು ಹಾಕಲಾಗುವುದು. ನಂತರ ಅಲ್ಲಿಂದ ತ್ಯಾಜ್ಯವನ್ನು ತೆಗೆಯುವ ಕೆಲಸ ಪ್ರತಿದಿನ ಮಾಡಲಾಗುವುದು. ಆದರೆ ಸ್ವಚ್ಛ ಮಾಡಿದ ನಂತರವೂ ಸುತ್ತಮುತ್ತಲಿನ ನಿವಾಸಿಗಳು ಮನೆ ಹತ್ತಿರ ಆಟೋಟಿಪ್ಪರ್ ಬಂದಾಗ ಕಸ ನೀಡಲಾಗಿದೆ,  ಇಲ್ಲಿಗೆ ತಂದು ಸುರಿಯುತ್ತಾರೆ.  ಹೀಗೆ ಸುರಿದ ಕಸದಿಂದ ಪ್ಲಾಸ್ಟಿಕ್ ಚೀಲಗಳು ಹಾಗೂ ಕಾಗದದ ಚೂರುಗಳು ಗಾಳಿಗೆ ಹಾರುಡುತ್ತಾ ರಸ್ತೆಯಲ್ಲಿ ಚೆಲ್ಲಾಡುವುದನ್ನು ಇಲ್ಲವೆನ್ನುವಂತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!