ರಾಯಚೂರು

ಇಂದು ಉಟಕನೂರು ಜಾತ್ರಾ ಮಹೋತ್ಸವ

ರಾಯಚೂರು: ಮಾನವಿ ತಾಲೂಕಿನ ಉಟಕನೂರು ಗ್ರಾಮದ ಆರಾಧ್ಯದೈವ ಮರಿಬಸವಲಿಂಗ ತಾತನವರ 22ನೇ ಜಾತ್ರಾ ಮಹೋತ್ಸವ ಫೆ. 4ರಂದು ನಡೆಯಲಿದೆ. ಶ್ರೀಮರಿಬಸವರಾಜ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಮಾರಂಭ ಮತ್ತು ಸಂಜೆ 5ಕ್ಕೆ ಹೂವಿನ ರಥೋತ್ಸವ ನಂತರ ಪುರಾಣ ಮಹಾ ಮಂಗಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾಮಗಾರಿಗೆ ಚಾಲನೆ
ರಾಯಚೂರು: ಮಾನವಿ ತಾಲೂಕಿನ ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಲ್ಲಿ 66 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಹಂಪಯ್ಯ ನಾಯಕ ಇತ್ತೀಚೆಗೆ ಚಾಲನೆ ನೀಡಿದರು. ಸುವರ್ಣ ಗ್ರಾಮ ಯೋಜನೆಯಡಿ ಮಾನವಿ ತಾಲೂಕಿನ ಕುರುಕುಂದಾ ಗ್ರಾಮದಲ್ಲಿ 46 ಲಕ್ಷ ಮತ್ತು ಪಟಕನದೊಡ್ಡಿ ಗ್ರಾಮದಲ್ಲಿ 15 ಲಕ್ಷ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಾಂತೇಶಸ್ವಾಮಿ ರೌಡೂರು, ಭೂಸೇನಾ ನಿಗಮದ ಅಧಿಕಾರಿ ಅನಿಲ್ ಪಾಟೀಲ್, ಸಹಾಯಕ ಕುಮಾರಸ್ವಾಮಿ ಸೇರಿ ವಿವಿಧ ಗ್ರಾಮಗಳ ಗ್ರಾಪಂ ಅಧ್ಯಕ್ಷ, ಸದಸ್ಯರು ಮತ್ತು ಜನಪ್ರತಿನಿಧಿಗಳು, ಮುಖಂಡರುಗಳು ಉಪಸ್ಥಿತರಿದ್ದರು.
ಚಿತ್ರಕಲೆ ಸ್ಪರ್ಧೆಯಲ್ಲಿ ಸಾಧನೆ
ರಾಯಚೂರು: ಬೆಂಗಳೂರಿನ ಚಿತ್ರಕಲಾ ಪರಿಷತ್‌ನಿಂದ ಇತ್ತೀಚೆಗೆ ಏರ್ಪಡಿಸಿದ್ದ 10ರಿಂದ 15 ವರ್ಷದ ಚಿಣ್ಣರ ಚಿತ್ರಕಲಾ ಸ್ಪರ್ಧೆಯಲ್ಲಿ ಮಾನವಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಎಂ.ಎನ್. ವಿಷ್ಣುತೀರ್ಥ ತೃತೀಯ ಸ್ಥಾನ ಪಡೆದಿದ್ದಾನೆ. ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಶಾಲೆಯ ಬೋಧಕ ವರ್ಗ ಅಭಿನಂದಿಸಿದೆ.
ಸುಂಕಿರೆಡ್ಡಿ
ರಾಯಚೂರು: ನಗರದ ನವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ರೆಡ್ಡಿ ಅವರ ತಂದೆ ಸುಂಕಿರೆಡ್ಡಿ ರಾಜೇಶ್ವರ ರೆಡ್ಡಿ(89) ಅವರು ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ ಎಸ್.ಆರ್. ರೆಡ್ಡಿ ಸೇರಿದಂತೆ ಮೂವರು ಗಂಡು ಮತ್ತು ಒಬ್ಬ ಪುತ್ರಿ, ಅಪಾರ ಬಂಧುಗಳನ್ನು ಅಗಲಿದ್ದಾರೆ. ಫೆ. 5ರಂದು ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಆಂಧ್ರದ ಮಹೆಬೂಬ್ ನಗರ ಜಿಲ್ಲೆಯ ಶೇರಿ ವೆಂಕಟಾಪುರದಲ್ಲಿ ನೆರವೇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!