ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮ ಸಮೀಪದ ಮಣ್ಣಿಕೇರಿ ಕ್ಯಾಂಪ್ ಬಳಿ ರಸ್ತೆ ಬದಿ ನಿಂತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬ ತೀವ್ರ ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಶೇಖ್ ರಿಜ್ವಾನ್ನ ಪುತ್ರ, ಜೆಡಿಎಸ್ ಕಾರ್ಮಿಕ ವಿಭಾಗದ ಸಂಘಟನಾ ಕಾರ್ಯದರ್ಶಿ ಇಮ್ರಾನ್ ರಿಜ್ವಾನ್(33) ಮೃತರು. ಕಾರ್ಯಕರ್ತ ಗಣಪತಿಗೆ ತೀವ್ರ ಗಾಯಗಳಾಗಿದ್ದು ಬಳ್ಳಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ: ಸಿಂಧನೂರಿನಿಂದ ರಾಯಚೂರಿಗೆ ಹೊರಟಿದ್ದ ಟಾಟಾ ಇಂಡಿಕಾ ಕಾರನ್ನು ಮೂತ್ರ ವಿಸರ್ಜನೆ ಮಾಡಲು ರಸ್ತೆ ಬದಿ ನಿಲ್ಲಿಸಲಾಗಿತ್ತು. ಇದೇ ವೇಳೆ ರಾಯಚೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಇಮ್ರಾನ್ ಅಸುನೀಗಿದ್ದಾನೆ. ಕಾರಿನಲ್ಲಿ 5 ಜಿಲ್ಲಾ ಜೆಡಿಎಸ್ ಮುಖಂಡರು ಪ್ರಯಾಣಿಸುತ್ತಿದ್ದರು. ನರಸಿಂಗರಾವ್, ಕೆ.ರಾಮಕೃಷ್ಣ, ಮಲ್ಲಿಕಾರ್ಜುನ ಅಪಘಾತದಿಂದ ಪಾರಾಗಿದ್ದಾರೆ. ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.