ರಾಯಚೂರು

ಹುಲಿಗೆಮ್ಮ ದೇವಿ ರಥೋತ್ಸವ

ಮುದಗಲ್: ಕೃಷ್ಣಾ ನದಿಯ ತಟದಲ್ಲಿರುವ ತೊಂಡಿಹಾಳ ಗ್ರಾಮದ ಅಧಿದೇವತೆ ಹುಲಿಗೆಮ್ಮ ದೇವಿಯ ಜಾತ್ರೆ ಅತ್ಯಂತ ಸಂಭ್ರಮ, ಶ್ರದ್ಧಾಭಕ್ತಿಯಿಂದ ನಡೆಯಿತು.
ಅನಿಷ್ಟ ಪದ್ಧತಿಗಳಾದ ಅರೆಬೆತ್ತಲೆ ಸೇವೆ, ದೇವದಾಸಿ ಪದ್ಧತಿಗಳು ಅಧಿಕಾರಗಳ ಕಟ್ಟುನಿಟ್ಟಿನ ಕ್ರಮ, ಸಂಘ ಸಂಸ್ಥೆಗಳ ತಿಳಿವಳಿಕೆ ಕಾರ್ಯಕ್ರಮದ ಮೂಲಕ ಬದಲಾವಣೆಯಾದ ಜನತೆಯಿಂದ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಬಿದ್ದಿರುವುದು ಕಂಡುಬಂದಿತು.
ಜಾತ್ರೆಗೆ ಆಗಮಿಸಿದ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಅಧಿದೇವತೆಯ ಭಕ್ತರು ತಮ್ಮ ಭಕ್ತಿಗೆ ಅನುಸಾರವಾಗಿ ತಮ್ಮ ಭಕ್ತಿಯನ್ನು ಅರ್ಪಿಸಿದರು.
 ಅನಿಷ್ಟ ದೇವದಾಸಿ ಪದ್ಧತಿಯ ಆಚರಣೆ ಫೆ.9ರ ಶನಿವಾರ ರಾತ್ರಿ ಬೆತ್ತಲೆ ಸೇವೆ ನಡೆಸಿಕೊಂಡು ಬರಲಾಗುತ್ತದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು. ಭಾನುವಾರ ಬೆಳಗ್ಗೆ ಅಗ್ನಿಕೊಂಡ ಹಾಯಿಸಲಾಯಿತು. ಸಂಜೆ 7 ಗಂಟೆ ಸುಮಾರಿಗೆ ರಥೋತ್ಸವ ಜರುಗಿತು. ಅಪಾರ ಭಕ್ತರು ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯಗಳಿಂದಲೂ ಭಕ್ತರು ಭಾಗವಹಿಸಿದ್ದರು.
ಶಾಸಕ ಮಾನಪ್ಪ ವಜ್ಜಲ್, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಟಿ.ಆರ್. ನಾಯಕ್, ಸಿದ್ದು ಬಂಡಿ, ಪಾಮಯ್ಯ ಮುರಾರಿ, ಎಚ್.ಬಿ. ಮುರಾರಿ, ಹೊನ್ನಪ್ಪ ಮೇಟಿ, ಶಿವನಗೌಡ ರಾಂಪೂರು, ಬಸಣ್ಣ ನರಕಲದಿನ್ನಿ. ಮಹಾಂತಗೌಡ ಬಯ್ಯಾಪುರ, ಮಲ್ಲಪ್ಪ ಭಗವತಿ, ರಾಮಣ್ಣ ನರಕಲದಿನ್ನಿ, ಕಂಠೆಪ್ಪಗೌಡ ಖೈರವಾಡಗಿ, ಮಲ್ಲಯ್ಯ ನರಕಲದಿನ್ನಿ, ಹಾಗೂ ಸಹಾಯಕ ಆಯುಕ್ತ ಟಿ.ಯೋಗೇಶ, ತಹಸೀಲ್ದಾರ್ ರಾಮಣ್ಣ ಹೊಸಮನಿ, ತಾಪಂ, ಕಾರ್ಯನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಮಸ್ಕಿ, ನಾರಾಯಣ, ಸಿಡಿಪಿಒ ಪ್ರಭಕಾರ, ಮುದಗಲ್ ಪಿಎಸ್‌ಐ ಬಸವರಾಜ್ ಬಸನಕೊಪ್ಪ, ಪಿಡಿಒ ಸೋಮನಗೌಡ ಪಾಟೀಲ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ