ರಾಯಚೂರು

'ನೇತಾಜಿ ತತ್ವ ಅಳವಡಿಸಿಕೊಳ್ಳಿ'

ರಾಯಚೂರು: ನಗರದ ಜಹೀರಾಬಾದ್ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಐಟಿಐ ಆಶ್ರಯದಲ್ಲಿ ಎಐಡಿವೈಒ ಸಂಘಟನೆಯಿಂದ ಬುಧವಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ಅವರು ಸಮಾರಂಭದಲ್ಲಿ ಮಾತನಾಡಿದರು. ಜಹೀರಾಬಾದ್ ಕಾಲೇಜಿನ ಹಿರಿಯ ಉಪನ್ಯಾಸಕಿ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ರಾಜೇಶ್ ಬಾವಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾರಂಭದಲ್ಲಿ ಆಂಜಿನೇಯ ಜಾಲಿಬೆಂಚಿ, ಸೂಗೂರೇಶ್ ಹಿರೇಮಠ, ವೀರೇಶ್ ಕಡಗಂದೊಡ್ಡಿ ಮತ್ತಿತರರು ಪಾಲ್ಗೊಂಡಿದ್ದರು. ಈ ವೇಳೆ ನೇತಾಜಿ ಅವರ ಕುರಿತು ಆಯೋಜಿಸಿದ್ದ ಪ್ರಬಂಧ, ಭಾಷಣ ಮತ್ತಿತರೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನೇತಾಜಿ ಜಯಂತಿ: ನಗರದ ವೀರಶೈವ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನೇತಾಜಿ ಅವರ ಜಯಂತಿಯನ್ನು ಎಐಡಿಎಸ್‌ಒ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಸಂಘಟನೆಯ ಮಾಜಿ ರಾಜ್ಯ ಉಪಾಧ್ಯಕ್ಷ ವೀರೇಶ್ ಎನ್.ಎಸ್. ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕ ಮಲ್ಲರೆಡ್ಡಿ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದೇಶದ ಐಕ್ಯತೆಗೆ ಹೋರಾಡಿದ ಬೋಸ್
ಲಿಂಗಸ್ಗೂರು: ದೇಶದಲ್ಲಿ ಸಮಾನತೆ ಮತ್ತು ಐಕ್ಯತೆಗಾಗಿ ಹೋರಾಡಿದ ನೇತಾಜಿ ಸುಭಾಶ್ಚಂದ್ರ ಭೋಸರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕೆಂದು ಎಐಡಿಎಸ್‌ಒ ಸಂಘಟನೆ ಸಂಚಾಲಕ ಸುನಿತಕುಮಾರ ಕರೆ ನೀಡಿದರು. ಸ್ಥಳೀಯ ಸಂಗಮೇಶ್ವರ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಶ್ಚಂದ್ರ ಭೋಸರ 116ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ, ಶರಣಪ್ಪ ಉದ್ಬಾಳ, ತಿರುಪತಿ, ಶರಣಪ್ಪ, ಉಪನ್ಯಾಸಕ ಶಶಿಕಾಂತ ಕಾಡ್ಲೂರು ಸೇರಿದಂತೆ ಇದ್ದರು.
ಇಂದಿನಿಂದ ನಾಟಕ
ಮುದಗಲ್: ಅಶೋಕಗೌಡ ಕಾಲೋನಿಯಲ್ಲಿ ಜ.24ರಿಂದ 26ರವರೆಗೆ ಶಿವಸಂಚಾರ ತಂಡದಿಂದ ನಾಟಕ ಪ್ರದರ್ಶನ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೆಳೆಯರ ಬಳಗದ ಮುಖಂಡ ಹಾಗೂ ಪಪಂ ಸದಸ್ಯ ಅಶೋಕಗೌಡ ಪಾಟೀಲ ಹೇಳಿದ್ದಾರೆ. ಜ.24ರಂದು ವ್ಯಾಸ ದೇಶಪಾಂಡೆಯವರಿಂದ ರಚಿತವಾದ ಚಿದಂಬರರಾವ್ ಜಂಬೆಯವರ ನಿರ್ದೇಶನದ ಕಳ್ಳರೋ ಬಲುಗಳ್ಳರೋ, 25 ರಂದು ಬೋದಾಯನ ರಚಿಸಿದ, ಕೆ.ವಿ. ಸುಬ್ಬಣ್ಣ ರೂಪಾಂತರಿಸಿದ ಹಾಗೂ ಇಕ್ಬಾಲ್ ಅಹ್ಮದ್ ನಿರ್ದೇಶನದ ಸೂಳೆ ಸನ್ಯಾಸಿ, 26ರಂದು ಬೆಳ್ಳಾವೆ ನರಹರಿಶಾಸ್ತ್ರಿ ರಚಿಸಿದ, ನಂ ಯತೀಶರವರ ನಿರ್ದೇಶನದ ಸದಾರಮೆ ಎನ್ನುವ ನಾಟಕಗಳನ್ನು ಸಾಯಂಕಾಲ 7 ಗಂಟೆಗೆ ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!