ಸಿಂಧನೂರು: ತಾಲೂಕಿನ ನಾಗರಬೆಂಚಿ ಗ್ರಾಮದ ಬಸನಗೌಡ ಪೊಲೀಸ್ ಪಾಟೀಲ್ ಭಾನುವಾರ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲರ ಆಪ್ತ ಸಹಾಯಕ ಶರಣಬಸವ ಸೇರಿದಂತೆ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಸಿಂಧನೂರಿನ ವೀರಶೈವ ರುದ್ರಭೂಮಿಯಲ್ಲಿ ಜರುಗಿತು.
ಸಿಂಧನೂರಿನ ನ್ಯಾಯವಾದಿ ಎನ್. ಸ್ವಾಮಿರಾವ್ಗೆ ಆಪ್ತರಾಗಿದ್ದ ನಾಗರಬೆಂಚಿಯ ಬಸನಗೌಡ ಬ್ರಾಹ್ಮಣರ ಓಣಿಯಲ್ಲಿ ಬೆಳೆದವರು. ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಮೂಲತಃ ಕೃಷಿಕರು.
ಸಂತಾಪ: ಅವರ ನಿಧನಕ್ಕೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮಸ್ಕಿ ಶಾಸಕರ ಆಪ್ತ ಸಹಾಯಕ ವೀರೇಶ, ರವಿ ನಾಡಗೌಡ, ಬಿಜೆಪಿ ಮಸ್ಕಿ ಕ್ಷೇತ್ರದ ಮಾಜಿ ಕಾರ್ಯದರ್ಶಿ ಬಸವರಾಜಸ್ವಾಮಿ ಹಸ್ಮಕಲ್, ಪ್ರಧಾನ ಕಾರ್ಯದರ್ಶಿ ಅಮರೇಶ ಗಚ್ಚಿನಮನಿ, ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷ ಶೇಷಗಿರಿರಾವ್ ಚನ್ನಳ್ಳಿ, ಪ್ರಹ್ಲಾದ ಗುಡಿ ವಕೀಲರು, ಮಹಾಂತೇಶ ಹಿರೇಮಠ, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ, ಪತ್ರಕರ್ತ ಶೇಖರ ಯರದಿಹಾಳ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವರಾಜಪ್ಪ ಗುಡದೂರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.