ರಾಯಚೂರು

ಹಲ್ಲೆ: ಇಬ್ಬರ ಸ್ಥಿತಿ ಗಂಭೀರ

ಸಿಂಧನೂರು: ಗಂಡ-ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತಿರುಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಸಿನಿಮೀಯ ಘಟನೆ ನಗರದ 25ನೇ ವಾರ್ಡ್ ಜನತಾ ಕಾಲೋನಿಯಲ್ಲಿ ಬುಧವಾರ ರಾತ್ರಿ 10 ಗಂಟೆಗೆ ನಡೆದಿದೆ.
ದೀಪಾ ಮತ್ತು ಗುರುನಾಥ ಚವ್ಹಾಣ ಎನ್ನುವ ದಂಪತಿ ಮಧ್ಯೆ ಉಂಟಾದ ಜಗಳವನ್ನು ಹಿರಿಯರು ಮಧ್ಯಸ್ಥಿಕೆ ವಹಿಸಿ ಶಮನಗೊಳಿಸಿದ್ದರು. ಆದರೆ ಮತ್ತೆ ಜಗಳ ಶುರುವಾಗಿದೆ. ಎಂದಿನಂತೆ ಮನೆಯವರೂ ಸಹ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ದೀಪಾ ಮನೆಯವರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾದಾಗ ಮಾತಿನ ಚಕಮಕಿ ನಡೆದು ಗುರುನಾಥ ಹಾಗೂ ಆತನ 4 ಜನ ಸಹೋದರರು ಸಲಾಕೆ, ಕೊಡಲಿ ಮತ್ತಿತರ ಮಾರಕಾಸ್ತ್ರಗಳಿಂದ ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ದೀಪಾಳ ತಂದೆ ಲಕಪತಿ ರಾಠೋಡ್, ಚಿಕ್ಕಪ್ಪ ಧನರಾಜ ರಾಠೋಡ್ಅವರ ತಲೆ ಮತ್ತಿತರ ಭಾಗಗಳಿಗೆ ತೀವ್ರ ಪೆಟ್ಟಾಗಿ ಚಿಂತಾಜನಕ ಸ್ಥಿತಿಗೆ ತಲುಪಿದ್ದು ಆಕೆಯ ಸಹೋದರರಾದ ರಾಘವೇಂದ್ರ ರಾಠೋಡ್, ರಮೇಶ ರಾಠೋಡ್ ಎನ್ನುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿ ನಗರ ಠಾಣೆ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ಗಾಯಾಳುಗಳನ್ನು ಆ್ಯಂಬುಲೆನ್ಸ್ ಸಹಾಯದೊಂದಿಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.
ಸ್ತಬ್ಧವಾದ ವಾರ್ಡ್: ಎರಡೂ ಕುಟುಂಬದ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಏಕಾಏಕಿ ಕರೆಂಟ್ ಹೋಗಿ ಗಲಾಟೆಗೆ ಪ್ರೆರೇಪಿಸಿತು. ರಸ್ತೆ ತುಂಬ ನೆರೆದಿದ್ದ ಜನರು ಕುರುಡರಂತಾಗಿ ಇಡೀ ಕಾಲೋನಿ ಸ್ಥಬ್ಧವಾಗಿ ಎರಡು ಕುಟುಂಬದ ನಡುವೆ ಮಾರಾಮಾರಿಯೇ ನಡೆದು ಹೋಯಿತು. ಕತ್ತಲಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಲಾಯಿತು. ಧನರಾಜ ಅವರ ತಲೆಗೆ ಸಲಾಕೆಯಿಂದ ಬಲವಾದ ಪೆಟ್ಟು ಬಿದ್ದಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡಿದರು.
 ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಕಂಡುಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪಿಎಸ್ಐ ಬಾಳನಗೌಡ ಅವರು ಎರಡು ಪೊಲೀಸ್ ಜೀಪ್ ಸಮೇತ ಪೊಲೀಸ್ ಸಿಬ್ಬಂದಿಯನ್ನು ರಾತ್ರಿಯಿಡೀ ಕಾವಲಿಗೆ ನಿಯೋಜಿಸಿದ್ದರು.
ಗಾಬರಿ: ಇನ್ನು ನೆಮ್ಮದಿಯಾಗಿ ನಿದ್ದೆಗೆ ಜಾರುತ್ತಿದ್ದ ಜನ ಓಣಿಯಲ್ಲಿ ಗಲಾಟೆಯ ಸದ್ದು ಜೋರಾಗಿದ್ದನ್ನು ಕೇಳಿ ಹೊರಬಂದು ಘಟನೆಯನ್ನು ಕಣ್ಣಾರೆ ಕಂಡು ಗಾಬರಿಗೊಂಡರು. ಅಲ್ಲದೆ ಜಗಳದಲ್ಲಿ ಮಾರಕಾಸ್ತ್ರಗಳ ಬಳಸುತ್ತಿರುವುದನ್ನು ನೋಡಿ ಜಗಳ ಬಿಡಿಸಲು ಮುಂದಾಗದೆ ಅಸಹಾಯಕರಾದರು. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ