ರಾಯಚೂರು

ಎಳ್ಳಿಗೆ ಎಲೆ ಸುರುಳಿ

ಮುದಗಲ್: ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಎಳ್ಳು ಬೆಳೆಗೆ ತೇವಾಂಶ ಹೆಚ್ಚಾಗಿ ಎಲೆ ಸುರಳಿ ರೋಗ ಹರಡಿದ್ದು, ರೈತರು ನಷ್ಟವನ್ನು ಅನುಭವಿಸುವಂತಾಗಿದೆ.
ಮಳೆ ತಡವಾಗಿ ಸುರಿದರೂ ರೈತರು ಸಾಲ ಮಾಡಿ ಎಳ್ಳನ್ನು ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ ಮೇಲೆ ಸಮರ್ಪಕ ಮಳೆಯಾಗದೆ ಬೆಳೆ ನೆಲ ಬಿಟ್ಟು ಮೇಲೇಳಲಿಲ್ಲ. ಜೂ.10ರಿಂದ 15ರವರೆಗೆ ಸುರಿದ ಮಳೆಯಿಂದಾಗಿ ಕಪ್ಪು ಭೂಮಿಯಲ್ಲಿ ಬಿತ್ತಿದ 100ಕ್ಕೂ ಅಧಿಕ ಎಕರೆ ಎಳ್ಳು ಬೆಳೆಗೆ ಎಲೆಸುರಳಿ ರೋಗ ತಗುಲಿ ಒಣಗುತ್ತಿದೆ.
ಬೆಳೆ ಹೂಬಿಡುವ ಹಂತದಲ್ಲಿದ್ದು ರೋಗದಿಂದ ಕಾಯಿ ಬಿಡುವುದಿಲ್ಲ ಎಂದು ರೈತ ಪಂಪಾಪತಿ ಗುಡಿಹಾಳ ತಿಳಿಸಿದ್ದಾರೆ. ರೋಗ ನಿಯಂತ್ರಿಸಲು ಕೀಟನಾಶಕ ಸಿಂಪರಣೆ ಮಾಡಿದರೂ ಹತೋಟಿಗೆ ಬಂದಿಲ್ಲ. ಇದಕ್ಕೆ ತೇವಾಂಶ ಹೆಚ್ಚಳ ಕಾರಣ ಎಂದು ರೈತರು ಹೇಳುತ್ತಿದ್ದಾರೆ. ಮುಂಗಾರಿಗೆ ಎಳ್ಳು ಬೆಳೆದು ಹಿಂಗಾರಿಗೆ ಜೋಳ ಬಿತ್ತನೆ ಮಾಡುವ ಉದ್ದೇಶದಿಂದ ಬೇಗನೆ ಬೆಳೆಯುವ ಬೆಳೆಯನ್ನು ರೈತರು ಬಿತ್ತನೆ ಮಾಡಿದ್ದರು.
ತೇವಾಂಶ ಹೆಚ್ಚಳ ಕಾರಣ: ಗುಡಿಹಾಳ, ಬುದ್ದಿನ್ನಿ, ತೆರಭಾವಿ, ಮಟ್ಟೂರು, ಸಂತೆಕೆಲ್ಲೂರು ಸೇರಿದಂತೆ ಕಪ್ಪು ಮಣ್ಣಿನಲ್ಲಿ ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾಳಾಗುತ್ತಿದ್ದು, ಕೆಲ ರೈತರು ಬೆಳೆಯನ್ನು ಕಿತ್ತೆಸೆಯುತ್ತಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ವಿಚಾರಿಸಿದರೆ ತೇವಾಂಶ ಹಚ್ಚಿದ್ದರಿಂದ ಒಣಗುತ್ತಿದೆ. ಆದರೂ ರೋಗದ ಹತೋಟಿಗೆ ರೈತರಿಗೆ ಕೀಟನಾಶಕ ಸಿಂಪಡಿಸಲು ಸಲಹೆ ನೀಡಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ರಾಮಚಂದ್ರಪ್ಪ ರಾಠೋಡ ತಿಳಿಸಿದ್ದಾರೆ.
ಪರಿಹಾರ ನೀಡಿ: ಮುಂಗಾರು ಹಂಗಾಮಿಗೆ ಸಮರ್ಪಕ ಮಳೆಯಾಗದೆ ರೈತರು ನಷ್ಟ ಅನುಭವಿಸುತ್ತಿದ್ದರು. ಅಲ್ವ ಸ್ವಲ್ಪ ಮಳೆಗೆ ಕಪ್ಪು ಮಣ್ಣಿನ ಜಮೀನಲ್ಲಿ ಎಳ್ಳು ಬಿತ್ತನೆ ಮಾಡಿದ್ದು ಏಕಾಏಕಿ 5 ದಿನ ಸುರಿದ ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಬೆಳೆ ರೋಗಕ್ಕೆ ತುತ್ತಾಗಿದೆ. ಕಂದಾಯ ಅಧಿಕಾರಿಗಳು ಕೂಡಲೇ ಬೆಳೆ ನಷ್ಟದ ಬಗ್ಗೆ ವರದಿ ಪಡೆದು ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.
ಈ ಕುರಿತು ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದು ಗುಡಿಹಾಳ ಗ್ರಾಮದ 20ಕ್ಕೂ ಅಧಿಕ ರೈತರ ಜಮೀನಲ್ಲಿ ಬೆಳೆದ ಎಳ್ಳು ರೋಗಕ್ಕೆ ಸಂಪೂರ್ಣ ತುತ್ತಾಗಿದ್ದು ಕೂಡಲೇ ಕಂದಾಯ ಅಧಿಕಾರಿಗಳ ವರದಿ ಪಡೆದು ಸರ್ಕಾರಕ್ಕೆ ಕಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!