ಸಿಂಧನೂರು: ಸಿಂಧನೂರು ತಾಲೂಕಿನ ಉದ್ಬಾಳ (ಇ.ಜೆ)ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಆರ್ಸಿ ಮಟ್ಟದ ಕ್ರೀಡಾಕೂಟ ಆರಂಭವಾಯಿತು. ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಎನ್.ಬಿ. ಕರಂಡಿ ಕ್ರೀಡಾಜ್ಯೋತಿ ಹಚ್ಚುವ ಮೂಲಕ ಉದ್ಘಾಟಿಸಿದರು. ತಾಪಂ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಎಸ್ಡಿಎಂಸಿ ಅಧ್ಯಕ್ಷೆ ದ್ರಾಕ್ಷಾಯಿಣಿ, ಉಪಾಧ್ಯಕ್ಷ ಬಸವರಾಜಗೌಡ, ಅಲಬನೂರು ಸಿಆರ್ಪಿ ಮಲ್ಲಪ್ಪ, ಉದ್ಬಾಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಬಾಳ (ಇಜೆ)ಯ ಮುಖ್ಯಗುರು ಮಹೇಶ, ಶಿಕ್ಷಕ ಸಂಗಮೇಶ, ಗ್ರಾಪಂ ಸದಸ್ಯರು, ಗ್ರಾಮದ ಗಣ್ಯರು, ಶಾಲಾ ಶಿಕ್ಷಕರು, ದೈಹಿಕ ಶಿಕ್ಷಕರು ಭಾಗವಹಿಸಿದ್ದರು.