ರಾಯಚೂರು

ಮಲಗಿತು ಸೋಯಾ ನಲುಗಿದ ರೈತ

ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ    ಗುಲ್ಬರ್ಗ    ಜು. 23
ಮುಂಗಾರು ಮಳೆ ಕೊರತೆ ನಡುವೆಯೇ ಅಷ್ಟಿಷ್ಟು ಮಳೆ ಬಂತೆಂದು ಸೋಯಾಬಿನ್ ಬಿತ್ತಿರುವ ಬಿಸಿಲೂರು ರೈತರೀಗ ಪರೇಶಾನ್. ಏಕೆಂದರೆ ಇವರು ಬಿತ್ತಿರುವ ಸೋಯಾಬಿನ್ ಮೊಳಕೆಯೊಡದೆ ಭೂಮಿಯಲ್ಲೇ ಉಳಿದುಕೊಂಡಿದೆ.
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದಲೇ ವಿತರಣೆಯಾಗಿರುವ ಸೋಯಾಬಿನ್ ಬಿತ್ತಿರುವ ರೈತರು ಕಂಗಾಲಾಗಿದ್ದಾರೆ. ತಮಗೆ ನೀಡಲಾದ ಬಿತ್ತನೆ ಬೀಜ ಕಳಪೆ ಎಂದು ದೂರುತ್ತಿದ್ದಾರೆ.
ಈ ಬೆಳವಣಿಗೆ ಗಮನಿಸಿರುವ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಯಾಬಿನ್ ಬಿತ್ತನೆಯ ನಂತರ ಮಳೆಯ ತೀವ್ರ ಕೊರತೆ ಕಾಡಿದೆ. ಇದರಿಂದ ಭೂಮಿಯಲ್ಲಿ ತೇವಾಂಶ ಕೊರತೆ ಕಾಡಿದ್ದರಿಂದ ಮೊದಲೇ ತುಂಬ ಸೂಕ್ಷ್ಮ ಬೆಳೆಯಾಗಿರುವ ಸೋಯಾ ಬಿತ್ತನೆಯಾದ ನಂತರ ಮೊಳಕೆಯೊಡೆದರೂ ಭೂಮಿ ಬಿಟ್ಟು ಹೊರಬಂದಿಲ್ಲ. ಮಳೆಯ ಕೊರತೆಯೇ ಈ ಬೆಳವಣಿಗೆಗೆ ಕಾರಣ ಎಂದು ಹೇಳುತ್ತಿದ್ದಾರೆ.
ಸೋಯಾದತ್ತ ರೈತರ ಚಿತ್ತ: ಜಿಲ್ಲೆಯಲ್ಲಿ ಸೋಯಾಬಿನ್ ಗುರಿ ಮೀರಿ ಬಿತ್ತನೆಯಾಗಿದೆ. 14 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಬಿತ್ತನೆಯಾದ ಪ್ರದೇಶ 23,254 ಹೆಕ್ಟೇರ್. ಆಳಂದ ಹಾಗೂ ಚಿಂಚೋಳಿ ತಾಲೂಕುಗಳಲ್ಲಿ ಸೋಯಾ ಬಿತ್ತನೆ ಅಧಿಕ. ಈ ತಾಲೂಕುಗಳಲ್ಲಿ ಕ್ರಮವಾಗಿ 4,880 ಹೆಕ್ಟೇರ್ ಹಾಗೂ 14,314 ಹೆಕ್ಟೇರ್ ಬಿತ್ತನೆಯಾಗಿದೆ.



ಆಳಂದ- ಚಿಂಚೋಳಿಯಲ್ಲಿ ಅಧಿಕ ಸಮಸ್ಯೆ


ಆಳಂದ ಹಾಗೂ ಚಿಂಚೋಳಿಯಲ್ಲಿ ಅಧಿಕ ಬಿತ್ತನೆಯಾಗಿದ್ದು, ಪ್ರದೇಶದಲ್ಲೇ ಸಮಸ್ಯೆಯೂ ಹೆಚ್ಚು ಕಂಡಿದೆ. ಆಳಂದದ ಖಜೂರಿ, ಕಿಣ್ಣಿ ಅಬ್ಬಾಸ್, ತೇಲಕುರ್ಣ, ಸಾಲೇಂಗಾವ್ ಇಲ್ಲೆಲ್ಲ ಶೇ.20ರಷ್ಟು ಮೊಳಕೆ ಕಂಡಿದ್ದು ಉಳಿದಂತೆ ಹಾನಿಯಾಗಿದೆ. ಚಿಂಚೋಳಿಯಲ್ಲಿಯೂ ಇದೇ ಪರಿಸ್ಥಿತಿ. ಹೀಗಾಗಿ ಜಿಲ್ಲೆಯ ರೈತರು ಲಾಭದಾಯಕ ಬೆಲೆಯ ಮೇಲೆ ಕಣ್ಣಿಟ್ಟು ಸೋಯಾ ಬಿತ್ತಿದ್ದರೂ ಮೊಳಕೆಯೊಡೆಯದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಚಿಂಚೋಳಿಯಲ್ಲಿ ರೈತರು ಸೋಯಾ ಬಿತ್ತಿದ ನಂತರ ಜು.8ರಂದು ಕೇವಲ 23 ಮಿ.ಮೀ. ಮಳೆಯಾಗಿದೆ. ಇದಾದ ನಂತರ ಇಲ್ಲಿಯವರೆಗೂ ಮಳೆ ಇಲ್ಲ. ಆಳಂದದಲ್ಲಿಯೂ ಇದೇ ಸ್ಥಿತಿ. ಸೋಯಾ ಮೊಳಕೆಯಾಗಲು 60ರಿಂದ 70 ಮಿ.ಮೀ ಮಳೆಯಾದರೂ ಬೇಕು. ತೀವ್ರ ಮಳೆಯ ಕೊರತೆಯೇ ಈ ಪರಿಸ್ಥಿತಿಗೆ ಕಾರಣ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ವಿವರಣೆ.


ವಿಜ್ಞಾನಿಗಳ ತಂಡದಿಂದ ಪರಿಶೀಲನೆ


ಸೋಯಾಬಿನ್ ಮೊಳಕೆಯೊಡೆಯದೆ ಉಂಟಾಗಿರುವ ಸಮಸ್ಯೆಯ ಬಗ್ಗೆ ಈಗಾಗಲೇ ಕೃಷಿ ಇಲಾಖೆ ಗುಲ್ಬರ್ಗ ಹಾಗೂ ಬೀದರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಗಮನಕ್ಕೆ ತಂದಿದೆ. ಇಲ್ಲಿಂದ ವಿಜ್ಞಾನಿಗಳ ತಂಡ 2 ದಿನಗಳಲ್ಲಿ ಸೋಯಾ ಹೊಲಗದ್ದೆ ಸುತ್ತಲಿದೆ ಎಂದು ತಿಳಿದು ಬಂದಿದೆ. ವಿಜ್ಞಾನಿಗಳು ವರದಿ ಸಿದ್ಧಪಡಿಸಿ ನೀಡಿದ ನಂತರವೇ ಸೋಯಾಬಿನ್ ಮೊಳಕೆಯಾಗದೆ ಮುರುಟಲು ಇರುವ ನಿಖರ ಕಾರಣ ಹೊರಬೀಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ