ರಾಯಚೂರು

ಭೇದಿಯಿಂದ ಮಕ್ಕಳ ಮರಣ

ಕ.ಪ್ರ. ವಾರ್ತೆ, ಸಿಂಧನೂರು, ಜು. 29
ಬೇಸಿಗೆ ಮತ್ತು ಪೂರ್ವ ಮುಂಗಾರಿನ ಮಾಸಗಳಲ್ಲಿ ಅತಿಸಾರ ಭೇದಿಯಿಂದ ನಿರ್ಜಲೀಕರಣ ಉಂಟಾಗಿ 5 ವರ್ಷದೊಳಗಿನ ಶೇ.11ರಷ್ಟು ಮಕ್ಕಳು ಮರಣ ಹೊಂದುತ್ತಿವೆ. ಇದನ್ನು ತಡೆಗಟ್ಟಲು ಒಆರ್‌ಎಸ್ ಜೀವಜಲದಿಂದ ತಯಾರಿಸಿದ ದ್ರಾವಣ ಹಾಗೂ ಜಿಂಕ್ ಸಲ್ಫೇಟ್‌ಅನ್ನು 14 ದಿನಗಳ ಕಾಲ ಮಕ್ಕಳಿಗೆ ನೀಡುವುದರಿಂದ ತಡೆಯಬಹುದೆಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಶರಣೇಗೌಡ ತಿಳಿಸಿದರು.
ಐದು ವರ್ಷದೊಳಗಿನ ಮಕ್ಕಳ ಸಾವು- ನೋವನ್ನು ತಡೆಗಟ್ಟುವ ಭಾರತ ಸರ್ಕಾರದ ಪ್ರಮುಖ ಆಶಯದೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ  ಜು.29ರಿಂದ ಆ.4ರವರೆಗೆ ಹಮ್ಮಿಕೊಂಡಿರುವ ಅತಿಸಾರಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂಧರ್ಭದಲ್ಲಿ ನಗರಸಭೆಯ ಶಹರಿ ರೋಜಗಾರ್ ಯೋಜನೆಯ ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಐಎಂಎ ಅಧ್ಯಕ್ಷ ಡಾ ಜೆ.ಎನ್. ಇರಕಲ್ಲ, ಕಾರ್ಯದರ್ಶಿ ಡಾ ಪಿ.ರವಿಕುಮಾರ, ಐಸಿಡಿಎಸ್‌ನ ಕಾತ್ಯಾಯಿನಿ, ವೈದ್ಯಾಧಿಕಾರಿಗಳಾದ ಡಾ. ಅಮ್ಜದ ಶರೀಪ್, ಡಾ. ವೀರೇಶ ರೆಡ್ಡಿ, ಡಾ. ಅಂಬುಜಾ,  ಹಿರಿಯ ಆರೋಗ್ಯ ಮೇಲ್ವಿಚಾರಕ ರಂಗನಾಥ ಗುಡಿ, ಹಿರಿಯ ಆರೋಗ್ಯ ಸಂದರ್ಶಕಿ ಎ.ಐ. ಪಾಟೀಲ್, ಶೂಶ್ರೂಷಕಿ ಸಣ್ಣಮಿನಾಕ್ಷಮ್ಮ,  ಗುರುಶಾಂತಮ್ಮ, ಅಮೃತಮ್ಮ, ಪುಷ್ಪರಾಣಿ, ಸಿರಿಮಾ, ನಿರ್ಮಲಾ ಮಹೇಶ್ವರಿ,  ಜಾನ್, ಉಷಾ, ಗೀತಾ, ಐಸಿಟಿಸಿಯ ಓಂಪ್ರಸಾದ್ ಹನುಮಗೌಡ, ಆರೋಗ್ಯ ಮಿತ್ರ ವೆಂಕಟೇಶ ಶಿವರಾಜ, ಸುಜಾತ ಅಂಗಡಿ, ಸುಜಾತ, ಬಸಪ್ಪ, ರೇಣುಕಮ್ಮ, ಶಿವಶಂಕರ, ಯೋಹಾನ ಜಯಶ್ರೀ ನರೇಶ ಬಸವರಾಜ, ಗೀತಾ ಗಾಯತ್ರಿ, ಅಸ್ಮತ್ ಬೇಗಂ ರೇಣುಕಾ  ಮಹಾಂತೇಶ ಪಾಲ್ಗೊಂಡಿದ್ದರು.

ಲಿಂಗಸ್ಗೂರಲ್ಲಿ ಡಾ. ಶಿವಬಸಪ್ಪ ಚಾಲನೆ
ಲಿಂಗಸ್ಗೂರು: ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಅತಿಸಾರ ಬೇಧಿ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ಶಿವಬಸಪ್ಪ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ, ದೇಶದಲ್ಲಿ 5 ವರ್ಷದೊಳಗಿನ ಶೇ.11ರಷ್ಟು ಮಕ್ಕಳು ಅತಿಸಾರ ಬೇಧಿಯಿಂದ ಮರಣ ಹೊಂದುತ್ತಿವೆ. ಇದರ ನಿಯಂತ್ರಣಕ್ಕೆ ಜು.28ರಿಂದ ಆಗಸ್ಟ್‌ವರೆಗೆ ತೀವ್ರತರ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ತಾಲೂಕಿನ ಎಲ್ಲ ಗ್ರಾಮಗಳಿಗೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಮಕ್ಕಳಿಗೆ ಒಆರ್‌ಸಿ ಸ್ಯಾಚೆಟ್ ವಿತರಿಸಿ ಇದರ ಉಪಯೋಗ ಕುರಿತು ತಿಳಿವಳಿಕೆ ನೀಡಬೇಕೆಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!