ಶಿವಮೊಗ್ಗ

ಅತ್ಯಾಚಾರ ವಿರೋಧಿಸಿ ಪ್ರತಿಭಟನೆ

ಭದ್ರಾವತಿ: ಪಟ್ಟಣದಲ್ಲಿ ಜ.16ರಂದು ನಡೆದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರಗತಿಪರ ವಿಚಾರ ವೇದಿಕೆ ಗುರುವಾರ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿತು.
 ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಘೋಷಣೆ ಕೂಗಿದರು.
 ನಂತರ ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಮುಖಂಡರಾದ ನಾಗಶ್ರೀ ಜಿ.ಆರ್, ರಂಜಿತಾ, ಪಾವನಾ, ಎಸ್.ಮೋಹನ್ ಕುಮಾರ್, ಸೌಮ್ಯ ಅವರು ಅತ್ಯಾಚಾರಿಗಳ ಲಿಂಗಹರಣ ಮಾಡಿ ಅವರಿಗೆ ಉಗ್ರಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ನಾಚಿಕೆಗೇಡು: ಬಿ.ಎಸ್.ಪಿ ಮುಖಂಡ ಎಸ್.ಕೆ. ಸುಧೀಂದ್ರ, ರಾಷ್ಟ್ರೀಯ ಯುವಜನ ಒಕ್ಕೂಟ ಜಿಲ್ಲಾ ಮುಖಂಡ ಮೂರ್ತಿ, ಕರ್ನಾಟಕ ಜನಶಕ್ತಿ ಮುಖಂಡ ಜಿ.ರಾಜು, ರಮೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಅಂಗವಿಕಲರ ಸಂಘಟನೆಯ ಕಾಣಿಕ್ಕೈರಾಜ್ ಮತ್ತು ದಸಂಸ ತಾಲೂಕು ಸಂಚಾಲಕ ಧರ್ಮೇಶ್ ಮೊದಲಾದವರು ಮಾತನಾಡಿ, ಮಹಿಳೆಯರು ತಮ್ಮ ಶೀಲ ರಕ್ಷಿಸಿಕೊಳ್ಳಲು ಕಷ್ಟಪಡುತ್ತಿರುವುದು ಪ್ರಜಾಪ್ರಭುತ್ವಕ್ಕಾದ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
 ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರವಾಗಿ ರು. 25 ಲಕ್ಷ ನೀಡಬೇಕು ಮತ್ತು ಬಾಲಕಿಯು ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂಬ ಮನವಿಯನ್ನು ದಸಂಸ ಜಿಲ್ಲಾ ಸಂಚಾಲಕ ಚಿನ್ನಯ್ಯ ಓದಿ ಶಿರಸ್ತೇದಾರರಾದ ನಫೀಸಾ ಬೇಗಂ ಅವರಿಗೆ ಅರ್ಪಿಸಿದರು. ಶಿರಸ್ತೇದಾರರು ಅದನ್ನು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸುವುದಾಗಿ ತಿಳಿಸಿದರು.
 ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜೇಂದ್ರ, ಕನ್ನಡ ಜನಶಕ್ತಿ ಅಧ್ಯಕ್ಷ ಜಿ.ರಾಜು, ದ.ಸಂ.ಸ. ತಾಲ್ಲೂಕು ಸಂಚಾಲಕ ಈಶ್ವರಪ್ಪ, ನಾಗರಿಕ ಸಂಘದ ರವಿ, ನಾಗರಾಜ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!