ಸೊರಬ: ಇಂಡೀಕರಣದ ಕರಿ ಛಾಯೆ ದಟ್ಟವಾಗಿದ್ದು, ತಾಲೂಕಿನ ಸುಮಾರು 38,600 ಎಕರೆ ಬಗರ್ ಹುಕುಂ ಸಾಗುವಳಿ ಭೂಮಿ ನಿಮ್ಮಿಂದ ಕೈ ಬಿಡಲಿದ್ದು, ಈ ಪ್ರಕ್ರಿಯೆ ಆದರೆ ಸುಮಾರು 18 ಸಾವಿರ ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ಮಧು ಬಂಗಾರಪ್ಪ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಸಾರೆಕೊಪ್ಪದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ರೈತರಿಗೆ ತಮ್ಮ ಆಡಳಿತಾವಧಿಯಲ್ಲಿ ನೀಡಿದ ಕೊಡುಗೆ ಈ ಇಂಡೀಕರಣ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಪಕ್ಷದ ವತಿಯಿಂದ ಗ್ರಾಮದ ಹಿರಿಯರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಡೀಕಪ್ಪ, ಈರಪ್ಪ ಗ್ರಾಮಾಭಿವೃದ್ಧಿ ಕುರಿತು ಬೇಡಿಕೆ ಸಲ್ಲಿಸಿದರು. ಎಂ.ಡಿ. ಶೇಖರ್, ಇಂಡೀಕರಣ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ತಾಲೂಕು ಅಧ್ಯಕ್ಷ ಎಚ್. ಗಣಪತಿ, ಅಧ್ಯಕ್ಷೆ ಶೇಖರಮ್ಮ, ತಾಪಂ ಸದಸ್ಯ ವೀರಭದ್ರಗೌಡ, ನೇತ್ರಾವತಿ, ಮಹಬಲೇಶ್ವರ, ಹುಚ್ಚರಾಯಪ್ಪ, ಮಾಕೊಪ್ಪದ ಫಕ್ಕೀರಪ್ಪ, ಎನ್.ಎಚ್. ಶ್ರೀಪಾದರಾವ್ ಇದ್ದರು.