ಶಿವಮೊಗ್ಗ

ಸಾಗರ ನಗರಸಭೆಯಿಂದ ಖಾಲಿ ಜಾಗ ತೆರವು

ಸಾಗರ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಮಧ್ಯದಲ್ಲಿರುವ ನಗರಸಭೆಗೆ ಸೇರಿದ ಖಾಲಿ ಜಾಗವನ್ನು ಬುಧವಾರ ತೆರವುಗೊಳಿಸಲಾಯಿತು.
ಈ ಭಾಗದಲ್ಲಿ ನಗರಸಭೆಗೆ ಸೇರಿದ 100 ಅಡಿ ಅಗಲ ಹಾಗೂ 300 ಅಡಿ ಉದ್ದದ ಜಾಗವಿದ್ದು, ಅಲ್ಲಿ ಖಾಸಗಿ ಬಸ್ ಪಿಕಪ್ ನಿಲ್ದಾಣ ನಿರ್ಮಿಸುವಂತೆ ಸಾರ್ವಜನಿಕರು ಹಿಂದಿನಿಂದಲೂ ನಗರಸಭೆಯನ್ನು ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆ ಕೆಲವು ದಿನಗಳ ಹಿಂದೆ ತನ್ನ ವ್ಯಾಪ್ತಿಯ ಜಾಗವನ್ನು ಗುರುತು ಮಾಡಿತ್ತು. ತೆರವುಗೊಳಿಸುವ ಕೆಲಸಕ್ಕೆ ಬುಧವಾರ ಚಾಲನೆ ನೀಡಿದಾಗ ಸ್ಥಳೀಯ ನಿವಾಸಿಗಳು ನಗರಸಭೆ ಅಧ್ಯಕ್ಷರನ್ನು ಹಾಗೂ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ಮುಂದುವರೆಯಿತು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷೆ ಎನ್.ಲಲಿತಮ್ಮ, ದಾಖಲೆ ಪರಿಶೀಲನೆ ನಡೆಸಿದ ನಂತರವೆ ನಗರಸಭೆಗೆ ಸೇರಿದ ಜಾಗವನ್ನು ತೆರವುಗೊಳಿಸಲಾಗುತ್ತಿದೆ. ಹಿಂದೆಯೆ ಜಾಗವನ್ನು ಸರ್ವೆ ಮಾಡಿ ಗಡಿ ಗುರುತಿಸಲಾಗಿದೆ. ಸ್ಥಳೀಯರಿಗೆ ಅನ್ಯಾಯ ಮಾಡಬೇಕು ಎಂಬ ಉದ್ದೇಶ ನಗರಸಭೆಗೆ ಇಲ್ಲ. ತಮ್ಮ ಖಾತೆಯ ಜಾಗ ಎಂದು ಕೆಲವರು ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಅವರನ್ನು ನಗರಸಭೆಗೆ ದಾಖಲೆ ಸಹಿತ ಬರಲು ಹೇಳಲಾಗಿದೆ. ಇನ್ನೊಮ್ಮೆ ದಾಖಲೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಹಿಂದಿನಿಂದಲೂ ಕೆಎಸ್‌ಆರ್‌ಟಿಸಿ ಹಾಗೂ ರೈಲ್ವೆ ನಿಲ್ದಾಣದ ನಡುವೆ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಪಿಕಪ್ ಬಸ್‌ನಿಲ್ದಾಣಕ್ಕೆ ನಗರಸಭೆ ಬಜೆಟ್ಟಿನಲ್ಲಿ 50 ಲಕ್ಷ ರೂ. ಮೀಸಲಿಡಲಾಗಿದೆ. ಅಗತ್ಯ ಜಾಗವನ್ನು ತೆರವುಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪೌರಾಯುಕ್ತ ಚಂದ್ರಶೇಖರ್, ನ್ಯಾಯಾಲಯದ ಆದೇಶದಂತೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದಾಗ ಸಂಬಂಧಪಟ್ಟವರಿಗೆ ಯಾವುದೆ ಸೂಚನೆ ನೀಡದೆ ತೆರವುಗೊಳಿಸಬಹುದು. ನಾವು ಹಿಂದೆಯೆ ಸ್ಥಳೀಯರಿಗೆ ನಗರಸಭೆ ಜಾಗವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದೇವೆ ಎಂದರು.
ನಗರಸಭೆ ಸದಸ್ಯರಾದ ತೀ.ನ.ಶ್ರೀನಿವಾಸ್, ವಿ.ಗುರು, ಗಣಾಧೀಶ್, ಸುಂದರಸಿಂಗ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪೂವಯ್ಯ, ಕಿರಿಯ ಅಭಿಯಂತರರಾದ ಎಚ್.ಕೆ.ನಾಗಪ್ಪ, ವಿಠ್ಠಲ್ ಹೆಗಡೆ, ಭರತ್ ಇನ್ನಿತರರು ಹಾಜರಿದ್ದರು.
ಸ್ಥಳೀಯರ ವಿರೋಧ: ತೆರವು ಕಾರ್ಯಾಚರಣೆ ಬಗ್ಗೆ ಸ್ಥಳೀಯರಾದ ಕೃಷ್ಣ ಭಟ್ ಮಾತನಾಡಿ, 1930-31ರಲ್ಲಿ ನಮ್ಮ ಹೆಸರಿಗೆ ಖಾತೆ ಆಗಿದೆ. ಈತನಕ ನಗರಸಭೆಯವರು ಜಾಗದ ಬಗ್ಗೆ ಗಮನ ಹರಿಸದೆ ಏಕಾಏಕಿ ತೆರವುಗೊಳಿಸಲು ಮುಂದಾಗಿರುವುದು ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ನಗರಸಭೆಯವರು ಸಣ್ಣಮನೆ ಗ್ರಾಮದಲ್ಲಿ ತಮ್ಮ ಜಾಗ ಇದೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಇರುವುದು ಕೊತ್ವಾಲನಕಟ್ಟೆ ಗ್ರಾಮದಲ್ಲಿ. ಆದರೂ ನಗರಸಭೆಯವರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಸ್ಥಳೀಯರಾದ ನರಸಿಂಹ ಭಟ್ ಮಾತನಾಡಿ, ನಗರಸಭೆಯಲ್ಲಿ ಸರ್ಕಾರಿ ದಾಖಲೆಗಳಿಗೆ ಬೆಲೆ ಇಲ್ಲ. ಇಷ್ಟು ವರ್ಷದಿಂದ ನಾವು ಜಾಗಕ್ಕೆ ಸಂಬಂಧಪಟ್ಟಂತೆ ಕಂದಾಯವನ್ನು ಪಾವತಿ ಮಾಡಿಕೊಂಡು ಬರುತ್ತಿದ್ದೇವೆ. ಏಕಾಏಕಿ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಕ್ರಮ ಖಂಡನೀಯ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!