ಶಿವಮೊಗ್ಗ

ವಿಪ್ರ ದಶಮಾನೋತ್ಸವ ಇಂದು

ಸಾಗರ: ಇಲ್ಲಿನ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘವು ದಶಮಾನೋತ್ಸವ ಅಂಗವಾಗಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಇಂದು ಸಂಜೆ 4-30ಕ್ಕೆ ತಾಲೂಕಿನ ಭೀಮನಕೋಣೆ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ದಾನಿಗಳಿಗೆ ಕೃತಜ್ಞತೆ ಹಾಗೂ ಸಂಘದ ಬ್ಲಾಗ್ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಬಿ.ಎನ್.ವಿ.ಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ. ಸಂಘದ ಬ್ಲಾಗನ್ನು ಉಪಾಧ್ಯಕ್ಷ ಎಲ್.ಟಿ.ಹೆಗಡೆ, ಸಾಧಕರಿಗೆ ಸನ್ಮಾನವನ್ನು ಹಿರಿಯ ಸಹಕಾರಿ ಎಂ.ಹರನಾಥ ರಾವ್, ಪ್ರತಿಭಾ ಪುರಸ್ಕಾರವನ್ನು ಜೋಷಿ ಫೌಂಡೇಶನ್ ಮುಖ್ಯಸ್ಥ ಅಬಸೆ ದಿನೇಶಕುಮಾರ್ ಜೋಷಿ, ದಾನಿಗಳನ್ನು ಮ.ಸ.ನಂಜುಂಡಸ್ವಾಮಿ ಸನ್ಮಾನಿಸಲಿದ್ದಾರೆ. ದಶಕದ ಸಂಭ್ರಮ ಪತ್ರಿಕೆಯನ್ನು ವಿಪ್ರ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಅಚ್ಯುತ್ ರಾವ್ ಬಿಡುಗಡೆ ಮಾಡಲಿದ್ದು, ಶಂಕರ ಶಾಸ್ತ್ರಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಶ್ರೀಧರ ಭಟ್, ಎಂ.ಎಸ್. ನಾಗರಾಜ್, ಶರಾವತಿ ಎಸ್.ರಾವ್ ಭೀಮನಕೋಣೆ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶೇಷ ತರಬೇತಿ ಜು.21ರಿಂದ
ಶಿವಮೊಗ್ಗ: ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜು.21ರಿಂದ ವಿಶೇಷ ತರಬೇತಿ ನಡೆಯಲಿದೆ. ಐ.ಎಸ್.ಟಿ.ಇ. ಮತ್ತು ಎಸ್.ಆರ್.ಎಂ. ವಿವಿ ವತಿಯಿಂದ 6 ದಿನಗಳ ಕಾಲ ನಡೆಯುವ ಫೋರೆನ್ಸಿಕ್ ಇನ್ ಸಿವಿಲ್ ಎಂಜಿನಿಯರಿಂಗ್ ಅಂಡ್ ಇಟ್ಸ್ ಫಂಡಮೆಂಟಲ್ಸ್ ತರಬೇತಿ ಕಾರ್ಯಕ್ರಮಕ್ಕೆ ಭಾರತದ ವಿವಿಧ ಎಂಜಿನಿಯರಿಂಗ್ ಕಾಲೇಜಿನಿಂದ ಉಪನ್ಯಾಸಕರು, ಕಾಮಗಾರಿ ಅಭಿಯಂತರರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!