ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಂಗನವಾಡಿ ಸಹಾಯಕಿಯರಿಗೆ ಅರ್ಜಿ

Rashmi Kasaragodu
Updated On : 2 Apr 2013, 12:42 pm

ತಿಪಟೂರು: ಶಿಶು ಅಭಿವೃದ್ದಿ ಯೋಜನೆಯಡಿಯಲ್ಲಿ ತಾಲ್ಲೂಕಿನ ವಾಸುದೇವರಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ  ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ನಗರವ್ಯಾಪ್ತಿಯ ಟಿ.ಎಲ್.ಪಾಳ್ಯ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಗೌರವಧನ ಸೇವೆಗೆ ಸಾಮಾನ್ಯ ವರ್ಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿಡಿಪಿಓ ತಿಳಿಸಿದ್ದಾರೆ.  ಅರ್ಜಿ ನಮೂನೆಗಾಗಿ ಕೆಲಸದ ಅವಧಿಯಲ್ಲಿ ಈ ಕಚೇರಿಯನ್ನು ಸಂಪರ್ಕಿಸಬೇಕು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಏಪ್ರಿಲ್  8ರಂದು ಸಂಜೆ 5.30ರೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿಟ್ಟಿರುವ ಟೆಂಡರ್ ಪೆಟ್ಟಿಗೆಯಲ್ಲಿ ಹಾಕತಕ್ಕದ್ದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


ಬೇಸಿಗೆ ಚಿತ್ರಕಲಾ ಶಿಬಿರ
ತುಮಕೂರು: ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಬೇಸಿಗೆ ಚಿತ್ರಕಲಾ ಶಿಬಿರ -2013 ನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಚಿತ್ರಕಲೆ, ಗ್ರಾಫಿಕ್, ಶಿಲ್ಪಕಲೆ, ಗ್ರೀಟಿಂಗ್ಕಾರ್ಡ್ ಮುಂತಾದ ಕಲೆಗಳನ್ನು ಕಲಿಸಿಕೊಡಲಾಗುವುದು. ಬೆಳಗ್ಗೆ 10-30 ರಿಂದ ಮಧ್ಯಾಹ್ನ 1 ರವರೆಗೆ ಶಿಬಿರ ನಡೆಯಲಿದೆ. ಆಸಕ್ತರು ಕಾಲೇಜಿನಲ್ಲಿ ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 0816-2273245, 9844462393, 9844553450 ಸಂಪರ್ಕಿಸುವಂತೆ ಕೋರಲಾಗಿದೆ. ಪ್ರವೇಶಕ್ಕಾಗಿ 9844553450 ಸಂಪರ್ಕಿಸಬಹುದಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement