'ಜನರನ್ನು ಭಯಭೀತಿಯಲ್ಲಿಟ್ಟಿದ್ದಾರೆ ಸಚಿವ ಸೊಗಡು'
ತುಮಕೂರು: ಕಳೆದ 20 ವರ್ಷಗಳಿಂದ ತುಮಕೂರು ನಗರ ಶಾಸಕ ಸೊಗಡು ಶಿವಣ್ಣ ಅವರು ಜನರನ್ನು ಭಯಭೀತಿಯಲ್ಲಿಟ್ಟಿದ್ದಾರೆ ಎಂದು ಕೆಜೆಪಿ ಮುಖಂಡ ಜ್ಯೋತಿ ಗಣೇಶ್ ಟೀಕಿಸಿದರು.
ಅವರು ತುಮಕೂರಿನ ಚಿಕ್ಕಪೇಟೆಯಲ್ಲಿ ಕೆಜೆಪಿ ಕಾರ್ಯಕರ್ತರ ಸಭೆ ಮತ್ತು ವಿವಿಧ ಪಕ್ಷಗಳ ಮುಖಂಡರು ಕೆಜೆಪಿ ಸೇರಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ಎಂ.ಎಲ್.ಎ ಶಿವಣ್ಣನವರು 20 ವರ್ಷಗಳಿಂದ ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಾ ಜನರಲ್ಲಿ ಭಯ ಭೀತಿ ಹುಟ್ಟುವಂತೆ ಮಾಡಿದ್ದಾರೆ. ಅವರಿಗೆ ತಕ್ಕಪಾಠ ಕಲಿಸಿ. ಹೆದರುವ ಅವಶ್ಯಕತೆ ಇಲ್ಲ. ಎಲ್ಲದಕ್ಕೂ ನಾವು ನಿಮ್ಮ ಜೊತೆ ಇದ್ದೇವೆ ಎಂದರು. ತುಮಕೂರು ನಗರದಲ್ಲಿ ಅಭಿವೃದ್ಧಿ ಎನ್ನುವುದು ಮರಿಚಿಕೆಯಾಗಿದೆ. ಇಂತವರನ್ನು ಈ ಸಾರಿ ತಿರಸ್ಕರಿಸಿ ಎಂದು ಶಿವಣ್ಣನವರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಭವಿಷ್ಯದ ನಗರದ ಕನಸು ಕಂಡಿದ್ದೇನೆ. ನನ್ನನ್ನು ಗೆಲ್ಲಿಸಿ ನಗರವನ್ನು ಅಭಿವೃದ್ಧಿ ಕಡೆ ತರುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಸಭೆಯಲ್ಲಿ ಹೆಬ್ಬಾಕ ರವಿಶಂಕರ್, ರವೀಶ್, ಅನೇಕರು ಭಾಗವಹಿಸಿದ್ದರು. ಇವರ ಸಮ್ಮುಖದಲ್ಲಿ ನಾರಾಯಣ ಟಿ.ಎಸ್., ಕೃಷ್ಣಚಾರ್, ಮಹಾದೇವಣ್ಣ ಸ್ವಾತಂತ್ರ ಹೋರಾಟಗಾರ ಕುಮಾರಸ್ವಾಮಿ ಕೆಜೆಪಿಗೆ ಸೇರ್ಪಡೆಯಾದರು.