ಜೆಡಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ
ತುಮಕೂರು: ತುಮಕೂರು ಜಿಲ್ಲಾ ಸಂಯುಕ್ತ ಜನತಾದಳದ (ಜೆಡಿಯು) ಜಿಲ್ಲಾ ಪ್ರದಾನ ಕಾರ್ಯದರ್ಶಿಯನ್ನಾಗಿ ವಕೀಲ ಸಿ.ಎಸ್. ಹನುಮಂತರಾಯ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಸಂಯುಕ್ತ ಜನತಾದಳದ ಅಧ್ಯಕ್ಷ ಕೆ.ಜಿ.ಎಲ್. ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರಭದ್ರಯ್ಯ ನೇಮಕ
ತುಮಕೂರು: ಕೊರಟಗೆರೆ ನಗರ ಕಾಂಗ್ರೆಸ್ ಸಮಿತಿ ಇತರೆ ಹಿಂದುಳಿದ ವರ್ಗಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೆರೆಯಾಗಲಹಳ್ಳಿ ಹೋಬಳಿಯ ವೀರಭದ್ರಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಜಿ. ಚಂದ್ರಶೇಖರಗೌಡ ತಿಳಿಸಿದ್ದಾರೆ