ಕೆಜೆಪಿ ಜಿಲ್ಲಾ ಯುವ ಕಾರ್ಯದರ್ಶಿ ತೀರ್ಥಕುಮಾರ
ತಿಪಟೂರು: ಜಿಲ್ಲಾ ಕೆಜೆಪಿ ಯುವ ಕಾರ್ಯದರ್ಶಿಯಾಗಿ ತಿಪಟೂರು ತೀರ್ಥಕುಮಾರ ಯಾದವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಹೆಬ್ಬಾಕ ರವಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ತೀರ್ಥಕುಮಾರ್ ಜಿಲ್ಲೆಯ ಎಲ್ಲಾ ಕೆಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಯುವ ಶಕ್ತಿಯ ಅವಶ್ಯಕತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ನನ್ನ ಶಕ್ತಿ ಮೀರಿ ಸಮಾಜದ ಯುವ ಪಡೆಯನ್ನು ಒಗ್ಗೂಡಿಸಿ ಲೋಕೇಶ್ವರ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಗೆಲವಿನ ಮೂಲಕ ಯಡಿಯೂರಪ್ಪನವರ ಕೈ ಬಲಪಡಿಸಲಾಗುವುದೆಂದು ಯಾದವ್ ತಿಳಿಸಿದರು. ನನ್ನ ಈ ಆಯ್ಕೆಗೆ ಸಹಕಾರ ನೀಡಿದ ಜಿಲ್ಲಾಧ್ಯಕ್ಷರಾದ ಹೆಬ್ಬಾಕ ರವಿ, ಮುಖಂಡರಾದ ಲೋಕೇಶ್ವರ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.